ರಾಯಬಾಗ
ಆಮಂತ್ರಣದಲ್ಲಿ ಕನ್ನಡ ಮೇಲುಗೈ: ವಿಶ್ವ ಚೇತನ ಶಾಲೆಗೆ ಶ್ಲಾಘನೆ:
ರಾಯಬಾಗ:ಖುಷಿ ಎಜುಕೇಷನ್ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ವಿಶ್ವ ಚೇತನ ಆಂಗ್ಲ ಮಾಧ್ಯಮ ಶಾಲೆಯು ಕನ್ನಡಾಭಿಮಾನಕ್ಕೆ ಹೊಸ ಮೆರುಗು ನೀಡಿದೆ. ಆಂಗ್ಲ ಮಾಧ್ಯಮದಲ್ಲಿ ಬೋಧನೆ ನಡೆಸುತ್ತಿದ್ದರೂ, ತಮ್ಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಶೇ.75ರಷ್ಟು ಕನ್ನಡ ಭಾಷೆಯನ್ನು ಬಳಸಿ ಮುದ್ರಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಇಂಗ್ಲಿಷ್ ಶಿಕ್ಷಣದ ನಡುವೆಯೂ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಮರೆಯದೆ ಅದನ್ನು ಪ್ರೋತ್ಸಾಹಿಸುವ ಶಾಲೆಯ ನಡೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಸಂಸ್ಥಾಪಕ ಅಧ್ಯಕ್ಷ ಚೈತನ ನಾಯಿಕ ಹಾಗೂ ಪ್ರಾಂಶುಪಾಲರಾದ ವಿದ್ಯಾ ನಾಯಿಕ ಸ್ಥಳೀಯ ಭಾಷೆಯ ಗೌರವವನ್ನು ಉಳಿಸಿ ಬೆಳೆಸುವ ಈ ಪ್ರಯತ್ನ ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಸಂದೇಶವನ್ನು ರವಾನಿಸುತ್ತಿದೆ. ಶಾಲೆಯ ಈ ಕ್ರಮವು ಇತರ ಶಿಕ್ಷಣ ಸಂಸ್ಥೆಗಳಿಗೆ ಪ್ರೇರಣೆಯಾಗುವಂತಿದ್ದು, ಕನ್ನಡಾಭಿಮಾನವನ್ನು ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
