ಪವಿತ್ರವಾದ ತಾಯಿ-ಮಗಳ ಸಂಬಂಧಕ್ಕೆ ಕಳಂಕ ತಂದ ಈ ಘಟನೆ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.
» ₹7 ಲಕ್ಷಕ್ಕೆ ತಾಯಿಯ ಪ್ರಾಣದ ಸುಪಾರಿ!
• ಕೇವಲ 23 ವರ್ಷದ ಮಗಳೊಬ್ಬಳು ತನ್ನ ತಾಯಿಯ ಮರಣದ ನಂತರ ಅವಳ ಹೆಸರಿನಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾಗೂ ತಾಯಿಗೆ ಸೇರಬೇಕಾದ ಸರ್ಕಾರಿ ಉದ್ಯೋಗ ತನಗೆ ಸಿಗುತ್ತದೆ ಎಂಬ ದುರಾಸೆಯಿಂದ ಈ ಕೃತ್ಯ ಎಸಗಿದ್ದಾಳೆ. ತಾಯಿಯನ್ನು ಮುಗಿಸಲು ಈಕೆ ಬರೋಬ್ಬರಿ 7 ಲಕ್ಷ ರೂಪಾಯಿಗಳನ್ನು ಹಂತಕರಿಗೆ ಸುಪಾರಿ (ಕಾಟ್ರಾಕ್ಟ್) ನೀಡಿದ್ದಾಳೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.
»ಹಣದ ಆಸೆಗೆ ಹೆತ್ತ ಕರುಳೇ ಕಮರಿತು:
• ನಂಬಿಕಸ್ಥ ಮೂಲಗಳ ಪ್ರಕಾರ, ತಾಯಿ ಬದುಕಿದ್ದರೆ ತನಗೆ ತಕ್ಷಣಕ್ಕೆ ಆಸ್ತಿ ಸಿಗುವುದಿಲ್ಲ ಮತ್ತು ಆಕೆಯ ಸರ್ಕಾರಿ ನೌಕರಿ ತನಗೆ ವರ್ಗಾವಣೆಯಾಗುವುದಿಲ್ಲ ಎಂದು ಅರಿತ ಮಗಳು, ಕ್ರೂರ ಹಂತಕರೊಂದಿಗೆ ಕೈಜೋಡಿಸಿದ್ದಾಳೆ. ಸುಪಾರಿ ಕಿಲರ್‌ಗಳು ಮಗಳ ಸೂಚನೆಯಂತೆ ತಾಯಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ.
• ಘಟನೆಯ ನಂತರ ಸಂಶಯಗೊಂಡು ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ, ಹೆತ್ತ ಮಗಳೇ ಈ ಇಡೀ ಕೊಲೆ ರಹಸ್ಯದ ಮಾಸ್ಟರ್ ಮೈಂಡ್ ಎಂಬುದು ಬಯಲಾಗಿದೆ. ಸದ್ಯ ಆರೋಪಿ ಮಗಳು ಹಾಗೂ ಆಕೆಗೆ ಸಹಕರಿಸಿದ ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.