ರಾಯಬಾಗ:
ಕರ್ನಾಟಕ ಸರ್ಕಾರದ ಆದೇಶದನ್ವಯ ರಾಯಬಾಗ ತಾಲೂಕಿನ ನೂತನ ತಾಲೂಕು ಆರೋಗ್ಯ ಅಧಿಕಾರಿಗಳಾಗಿ (THO) ಡಾ. ಸತೀಶ್ ಕಲ್ಲಟ್ಟಿ ಅವರು ಆಯ್ಕೆಯಾಗಿದ್ದಾರೆ.
» ಅವರ ದಕ್ಷತೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿನ ಸುದೀರ್ಘ ಸೇವೆಯನ್ನು ಗುರುತಿಸಿ ಸರ್ಕಾರ ಈ ಜವಾಬ್ದಾರಿಯನ್ನು ನೀಡಿದೆ. ಡಾ. ಸತೀಶ್ ಕಲ್ಲಟ್ಟಿ ಅವರ ನೇಮಕಾತಿಗೆ ತಾಲೂಕಿನ ಸಾರ್ವಜನಿಕರಿಂದ, ವೈದ್ಯಕೀಯ ವಲಯದಿಂದ ಹಾಗೂ ಗಣ್ಯರಿಂದ ವ್ಯಾಪಕ ಹರ್ಷ ವ್ಯಕ್ತವಾಗಿದೆ.
» ತಾಲೂಕಿನ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಮತ್ತು ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ತಲುಪಿಸಲು ಅವರು ಶ್ರಮಿಸಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಲಾಗಿದೆ. ನೂತನ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಾ. ಸತೀಶ್ ಕಲ್ಲಟ್ಟಿ ಸರ್ ಅವರಿಗೆ ಆತ್ಮೀಯ ಹಾಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಮುಂದಿನ ಯಶಸ್ವಿ ಸೇವೆಗೆ ಶುಭ ಹಾರೈಕೆಗಳು.
〉 ವರದಿ✒️
• ಭೀಮು ಚೌಗಲಾ – 7676670679
