July 18, 2026
WhatsApp Image 2026-07-18 at 8.33.58 AM

ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಶ್ರೀ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರು ನಿಧನರಾಗಿದ್ದಾರೆ. ಅವರ ನಿಧನದ ವಾರ್ತೆಗೆ ನಾಡಿನಾದ್ಯಂತ ತೀವ್ರ ಕಂಬನಿ ಮತ್ತು ದುಃಖ ವ್ಯಕ್ತವಾಗಿದೆ.

ಶ್ರೀ ದೇವೇಗೌಡ ಅವರ ಸುದೀರ್ಘ ರಾಜಕೀಯ ಹಾಗೂ ಸಾಮಾಜಿಕ ಸಾರ್ವಜನಿಕ ಜೀವನದ ಏಳು-ಬೀಳುಗಳಲ್ಲಿ ಸದಾ ನೆರಳಾಗಿ ನಿಂತಿದ್ದ ಶ್ರೀಮತಿ ಚೆನ್ನಮ್ಮ ಅವರು, ಇಡೀ ದೇವೇಗೌಡರ ಕುಟುಂಬಕ್ಕೆ ದಾರಿದೀಪವಾಗಿದ್ದರು.

ಮಾತೃಶ್ರೀಯನ್ನು ಕಳೆದುಕೊಂಡಿರುವ ದೇವೇಗೌಡರ ಕುಟುಂಬಕ್ಕೆ ತೀವ್ರ ಆಘಾತ ಎದುರಾಗಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಇಡೀ ಕುಟುಂಬಕ್ಕೆ ನೀಡಲಿ ಎಂದು ಗಣ್ಯರು ಪ್ರಾರ್ಥಿಸಿ, ತಮ್ಮ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555