May 30, 2026
WhatsApp Image 2026-03-30 at 7.21.33 PM (1)

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ

ವೃದ್ಯಾಪ್ಯದಲ್ಲಿ ಜೀವನಕ್ಕೆ ಆಸರೆಯಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಅಥಣಿ ಜಿಲ್ಲೆ ವ್ಯಾಪ್ತಿಯ ರಾಯಬಾಗ ಯೋಜನಾ ಕಚೇರಿಯ ಮಾವಿನಹೋಂಡ ಗ್ರಾಮದ 70 ವರ್ಷದ ಲಿಂಬೆವ್ವಾ ಶಿವಪುರೆ ಇವರು ಗಂಡ ಮಕ್ಕಳು ಯಾರು ಇಲ್ಲದೆ ಒಬ್ಬಂಟಿಯಾಗಿ ತಗಡಿನ ಮನೆಯಲ್ಲಿ ಜೀವನ ನಡೆಸುತ್ತಿದ್ದರು ಇವರಿಗೆ ಸರಿಯಾಗಿ ಕಣ್ಣು ಕಾಣದೆ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿತ್ತು. ಧರ್ಮಸ್ಥಳ ಯೋಜನೆಯಿಂದ ಕಳೆದ 3 ವರ್ಷಗಳಿಂದ 1000/- ರೂಪಾಯಿ ಮಾಶಾಸನ  ಪಡೆದು ಜೀವನ ಸಾಗಿಸುತ್ತಿದ್ದ ಇವರು ತಗಡಿನ ಮನೆ ವಾಸಿಸುತ್ತಿದ್ದರು. ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಯವರ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ.ಹೆಗ್ಗಡೆ ಮಾರ್ಗದರ್ಶನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಅಡಿಯಲ್ಲಿ ಜೋಪಡಿಯಲ್ಲಿ ವಾಸಿಸುತ್ತಿರುವ ಲಿಂಬೆವ್ವಾ ಶಿವಾಪರೆ
134920/- ವೆಚ್ಚದಲ್ಲಿ ಉಚಿತವಾಗಿ ವಾತ್ಸಲ್ಯ ಮನೆ ನಿರ್ಮಿಸಿ ಇಂದು ಮನೆ ಹಸ್ತಾಂತರ ಮಾಡಲಾಯಿತು,ಯೋಜನೆಯ ಧಾರವಾಡ ಪ್ರಾದೇಶಿಕ ಗೌರವಾನ್ವಿತ ನಿರ್ದೇಶಕರಾದ ಶ್ರೀಮತಿ ದಯಾಶೀಲ ಮೇಡಂ ಅವರು ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ವಾತ್ಸಲ್ಯ ಪಲಾನುಭವಿಯವರಿಗೆ ಶುಭಹಾರೈಸಿದರು .ಜಿಲ್ಲಾ ನಿರ್ದೇಶಕರು ನಗರತ್ನಾ ಹೆಗ್ಗಡೆ ಮೇಡಂ,ಬೆಂಡವಾಡ ಗ್ರಾಮ ಪಂಚಾಯತ ಚೇರಮನ್ನ ಮಹದೇವ್ ಲಕ್ಷ್ಮೇಶ್ವರ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವನು ಧೂಪಾದಾಳೆ ,ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಅಪ್ಪಸಾಬ ಬಾನೆ,ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ್ ಯೋಜನಾಧಿಕಾರಿ ಸುಧಾ ನಾಯಿಕ್, ರಾಯಬಾಗ ತಾಲೂಕಿನ ಯೋಜನಾಧಿಕಾರಿ ಮಹೇಶ್ವರಪ್ಪ ಜಿ,ವಲಯದ ಮೇಲ್ವಿಚಾರಕರಾದ ಸಂತೋಷ ಹುಂಬಿ,ಜಾನವಿಕಾಸ ಸಮನ್ವಯ ಅಧಿಕಾರಿ ಸುರೇಖಾ ಹೆಬ್ಬಳ್ಳಿ,ಸೇವಾ ಪ್ರತಿನಿಧಿಯಾವರಾದ ರೇಖಾ ಚವ್ಹಾಣ, ರೇವಪ್ಪಾ, ಮಂಗಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555