ಭಗವಾನ್ ಮಹಾವೀರ ರವರ ಜಯಂತಿಯನ್ನು ರಾಯಬಾಗ ತಹಶೀಲ್ದಾರ್ ಕಾರ್ಯಾಲಯದಲ್ಲಿ ಆಚರಿಸಲಾಯಿತು.

ಕ್ರಿ, ಪೂ 599 ರ ಚೈತ್ರ ಶುಕ್ಲ ತ್ರಯೋದಶಿಯಂದು ಜನಿಸಿದ ಮಹಾವೀರರು ಎಲ್ಲ ಜೀವಿಗಳನ್ನು ಒಬ್ಬರ ಸ್ವಂತ ಆತ್ಮವೇಂದು ಅನುಭವಿಸುವ ಸಂದೇಶವನ್ನು ಭೋದಿಸಿದರು,ಎಲ್ಲ ಜೀವಿಗಳ ನಡುವೆ ಪರಸ್ಪರ ಸಹಬಾಳ್ವೆ ಮತ್ತು ಸಹಕಾರದ ಸಂದೇಶವನ್ನು ತಿಳಿಸಿದರು, ರಾಜಮನೆತನದ ಸುಖ ವೈಭೂಗ ಗಳನ್ನು ಕುಟುಂಬ ಹಾಗೂ ಎಲ್ಲಾ ಲೌಕಿಕ ಸುಖಗಳನ್ನು ತ್ಯಜಿಸಿ ತಮ್ಮ 30 ವಯಸ್ಸಿನಲ್ಲಿ ತ್ಯಾಗದ ಮಾಗ೯ವನ್ನು ಸ್ವೀಕರಿಸಿದರು 12 ವರ್ಷಗಳ ಕಾಲ ಕಠಿಣ ತಪಸ್ಸು ಧ್ಯಾನ ಮತ್ತು ಮೌನ ಧ್ಯಾನದ ಮೂಲಕ ಆತ್ಮ ಶುದ್ಧಿಯ ಮಾರ್ಗವನ್ನು ಅನುಸರಿಸಿದ ಅವರು ಮಾನವ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು ಅವರ ಸಮ ಚಿತ್ತದಿಂದ ಲೆಕ್ಕವಿಲ್ಲದಷ್ಟು ಕಷ್ಟಗಳನ್ನು ಸಹಿಸಿಕೊಂಡು ಅಂತಿಮವಾಗಿ ಜ್ಞಾನವನ್ನು ಸಂಪಾದಿಸಿ ಸರ್ವಜ್ಞರಾದರು ನಂತರ 30 ವರ್ಷಗಳ ಕಾಲ ಜನರ ಕಲ್ಯಾಣಕ್ಕಾಗಿ ಬೋಧಿಸಿದರು ಅವರ ಅಹಿಂಸೆ ಸ್ವಾಧೀನ ಇಲ್ಲದಿರುವುದು ಮತ್ತು ಬಹುತ್ವದ ಸಂದೇಶವು ಎಲ್ಲ ಮಾನವೀಯತೆಗೆ ಮಾರ್ಗದರ್ಶಿ ಆಯಿತು. ಅವರು ಸಮಾಜದ ಪ್ರತಿಯೊಂದು ವರ್ಗವನ್ನು ರಾಜರಿಂದ ಹಿಡಿದು ಸಾಮಾನ್ಯ ಜನರವರೆಗೆ ಸಮಾನವಾಗಿ ನೀತಿಯ ಮಾರ್ಗಕ್ಕೆ ಮಾರ್ಗದರ್ಶನ ಮಾಡಿದರು. “ಬದುಕು ಮತ್ತು ಬದುಕಲು ಬಿಡಿ” ಹಾಗೂ “ಅಹಿಂಸಾ ಪರಮೋಧರ್ಮ”ಎಂಬ ಈ ಸಂದೇಶಗಳು ಮಾನವೀಯತೆಗೆ ಶಾಶ್ವತ ಸ್ಪೂರ್ತಿಯಾಗಿ ಉಳಿದಿವೆ. ಇಂದಿನ ಈ ಯುದ್ಧದ ಕಾರ್ಮೋಡದ ಕಾಲಘಟ್ಟದಲ್ಲಿ ಮಹಾವೀರ ರ ಜೀವನ ಸಂದೇಶ ಜಗತ್ತಿಗೆ ಬೆಳಕಾಗಬೇಕು ಅವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭಗವಾನ್ ಮಹಾವಿರರು ಮಾನವ ಕಲ್ಯಾಣಕ್ಕಾಗಿ ಬೋಧಿಸಿದ ಸತ್ಯ, ಅಹಿಂಸೇ ಮತ್ತು ಅಪರಿಗ್ರಹ ತತ್ವಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ವಿಶ್ವದ ತುಂಬೆಲ್ಲ ಶಾಂತಿ ನೆಲೆಸುತ್ತದೆ 2624 ವರ್ಷಗಳ ಹಿಂದೆ ಮಹಾವೀರ್ ಅವರು ಮಾನವ ಕಲ್ಯಾಣಕ್ಕಾಗಿ ವಿಶ್ವ ಸಂದೇಶ ನೀಡಿದ್ದಾರೆ ,ಇಡೀ ವಿಶ್ವಕ್ಕೆ ಮಾನವತಾವಾದಿಯ ದಾರಿ ಮತ್ತು ಬಂಧುತ್ವದ ಭಾವನೆ ಬೆಳೆಸುವ ಸ್ಪೂರ್ತಿಯ ಮಹೋನ್ನತ ಕಾಯ೯ ಕೈಗೊಂಡು ಮಾನವೀಯತೆಯ ಸಂದೇಶವನ್ನು ಜಗಕ್ಕೆ ಸಾರಿದ್ದಾರೆ.
ಮಹದೇವ್ ಸನಮುರೆ ತಶಿಲ್ದಾರ ರಾಯಬಾಗ, ಮಂಗಸೂಳಿ ಸಿರಸ್ದಾರ , ಮಲ್ಲಪ್ಪ ಸನದಿ ಸರ್ವೆ ಇಲಾಖೆ , ವಿಶ್ವನಾಥ್ ಹಾರುಗೇರಿ ಟ್ರೆಸರಿ , ಸೋಮಶೇಖರ್ ಜೋರೆ ಕಂದಾಯ ನಿರೀಕ್ಷಕರು , ವಿನಾಯಕ್ ಬಾಟೆ ಆಹಾರ ಇಲಾಖೆಯ ನಿರೀಕ್ಷಕರು, ಅನಿಲ್ ಶೆಟ್ಟಿ , ಸಮ್ಮತಿ ಶೆಟ್ಟಿ , ಶೀತಲ್ ಬೆಡಿಕ್ಯಾಳೆ, ಉದಯ ಬಡೊರೆ, ಭರತೇಶ್ ಶೆಟ್ಟಿ , ಶೀತಲ ಕುಡಚಿ , ಸಂತೋಷ್ ಪಾಟೀಲ ಇನ್ನಿತರ ಜೈನ್ ಸಮಾಜದ ಮುಖಂಡರು ಮತ್ತು ಎಲ್ಲ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
