ರಾಯಬಾಗ ವಿಧಾನಸಭಾ ಕ್ಷೇತ್ರದ ಜಾಗನೂರ ಗ್ರಾಮದಲ್ಲಿ, 40 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಿಂದ ಪಾಮಲದಿನ್ನಿ ಗ್ರಾಮದವರೆಗಿನ ರಸ್ತೆ ಸುಧಾರಣೆ ಮತ್ತು ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಮಂಜೂರಾದ 25 ಲಕ್ಷ ರೂ. ವೆಚ್ಚದಲ್ಲಿ ಕದಂ ತೋಟದವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ಕೈಗೊಂಡು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಸುರೇಶ ಬೆಲ್ಲದ, ಶ್ರೀ ಸದಾಶಿವ ಘೋರ್ಪಡೆ, ಶ್ರೀ ಸೀತಾರಾಮ ಕುಲಕರ್ಣಿ, ಶ್ರೀ ಹನಮಂತ ರಬಕವಿ, ಶ್ರೀ ಲಕ್ಷ್ಮಣ ಹಣಮನ್ನವರ, ಶ್ರೀ ಮಲ್ಲೇಶ ಹನುಮಂತಗೋಳ, ಶ್ರೀ ಮಹಾಂತೇಶ ಶಿರಗೂರ, ಶ್ರೀ ಮಾಳಪ್ಪ ಗೊರಗುದ್ದಿ, ಶ್ರೀ ದುಂಡಪ್ಪ ಮುಶಾಪ, ಶ್ರೀ ಕಿರಣಗೌಡ ಪಾಟೀಲ, ಶ್ರೀ ರಾಮಚಂದ್ರ ಮರಾಠ, ಶ್ರೀ ಸಿದ್ದು ಖಿಂಡಿ, ಶ್ರೀ ಉದ್ದಪ್ಪ ಖಿಂಡಿ, ಶ್ರೀ ರಾಮಕೃಷ್ಣ ಗಡಗಡಿ, ಶ್ರೀ ರಾಮಪ್ಪ ಗಿಡ್ಡಪಗೋಳ, ಗೋಪಾಲ ನಾವಿ, ಶ್ರೀ ಪರಸಪ್ಪ ತಿಗಡಿ, ಶ್ರೀ ರಾಮಪ್ಪ ತಿಗಡಿ, ಶ್ರೀ ಸಿದ್ದರಾಮ ಹನುಮನ್ನವರ, ಶ್ರೀ ಮಹಾದೇವ ತಿಗಡಿ, ಶ್ರೀ ಎಸ್.ಎಸ್. ಹೊಸಮನಿ, ಶ್ರೀ ರವಿ ಜಿವನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
