ಬೆಳಗಾವಿ
1. ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಶಿಕ್ಷಕರ ಸಂಘದ ಮನವಿ
2. ವರ್ಗಾವಣೆಗೊಂಡ ಶಿಕ್ಷಕರ ಬಿಡುಗಡೆಗೆ ತಕ್ಷಣ ಸ್ಪಂದನೆ
3. ಜನಗಣತಿ ಕಾರ್ಯಕ್ಕೆ ಶಿಕ್ಷಕರಿಂದ ಪೂರ್ಣ ಸಹಕಾರ
4. ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ಶಿಕ್ಷಕ ವಲಯ ಹರ್ಷ
• ಬೆಳಗಾವಿ ಜಿಲ್ಲೆಯ ಶಿಕ್ಷಕರ ವರ್ಗಾವಣೆ ಮತ್ತು ಜನಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಇದ್ದ ದೊಡ್ಡ ಗೊಂದಲವೊಂದು ಈಗ ಬಗೆಹರಿದಿದೆ. ಜನಗಣತಿ ಕಾರ್ಯದ ನೆಪದಲ್ಲಿ ವರ್ಗಾವಣೆಗೊಂಡ ಶಿಕ್ಷಕರ ಬಿಡುಗಡೆಯನ್ನು ಮುಂದೂಡಿದ್ದ ಆದೇಶದಿಂದ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕುರಿತು ಶಿಕ್ಷಕರ ಸಂಘ ನೀಡಿದ ಮನವಿಗೆ ಜಿಲ್ಲಾಧಿಕಾರಿಗಳು ಪೂರಕವಾಗಿ ಸ್ಪಂದಿಸಿದ್ದು, ಶಿಕ್ಷಕರ ಮೊಗದಲ್ಲಿ ಮಂದಹಾಸ ಮೂಡಿದೆ.
• ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘ ಬೆಳಗಾವಿ ಘಟಕದ ವತಿಯಿಂದ ಈ ಕುರಿತಾದ ಮನವಿಯನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
• ಜನಗಣತಿಗೆ ಸಂಬಂಧಿಸಿದಂತೆ ವರ್ಗಾವಣೆಗೊಂಡ ಮತ್ತು ಪದೋನ್ನತಿ ಪಡೆದ ಪ್ರಧಾನ ಗುರುಗಳನ್ನು ಮೇ 15 ರ ನಂತರ ಬಿಡುಗಡೆ ಮಾಡುವಂತೆ ಆದೇಶವನ್ನು ನೀಡಲಾಗಿತ್ತು. ಆದರೇ ಇದು ಶಿಕ್ಷಕರಿಗೆ ಅನಾನೂಕೂಲವಾಗಲಿದೆ. ವರ್ಗಾವಣೆಗೊಂಡವರು ಅವರ ಸ್ಥಳಕ್ಕೆ ಹೋಗಿ ಹಾಜರಾಗಿ, ಬಳಿಕ ಜನಗಣತಿಯ ಪ್ರಕ್ರಿಯೆಯನ್ನು ಶೇ. 100 ರಷ್ಟು ಪೂರ್ಣಗೊಳಿಸುವುದಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬಿಡುಗಡೆ ಹಾಜರಾತಿ ಕ್ರಮವನ್ನು ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ. ಈ ಹಿನ್ನೆಲೆ ಅವರಿಗೆ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ್ ಹೆಬಳಿ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಗಜಾನನ ಸೊಗಲನ್ನವರ, ರಮೇಶ ಧೋಣಿ ಸೇರಿದಂತೆ ಇನ್ನುಳಿದವು ಭಾಗಿಯಾಗಿದ್ಧರು.
