March 29, 2026
WhatsApp Image 2026-03-18 at 2.41.54 PM

ಬಳ್ಳಾರಿ♥

ಕನ್ನಡಿಗ ಭಾರತೀಯ ನಾಗರೀಕ ಮಹಾರಾಜರು ನೀವು  ನಿಮ್ಮ ಗಮನಕ್ಕೆ ಈ ಒಂದು ಮಾಹಿತಿಯನ್ನು ನೀಡುತ್ತಿದ್ದೇನೆ. ಇಲ್ಲೊಂದು ಪತ್ರ ಇದೆ ಓದಿ ದಯವಿಟ್ಟು. ಬಳ್ಳಾರಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಗೆ ಪ್ರಥಮ ಮೇಲ್ಮನವಿ ವಿಚಾರಣೆಗೆ ಬರಲು ತಿಳಿಸಿದ್ದಾರೆ.

ಅರ್ಜಿದಾರರು ಗುರುತಿನ ಚೀಟಿ ಒಯ್ಯಬೇಕಂತೆ. ಈ ಬುದ್ದಿವಂತ ಅಧಿಕಾರಿಗೆ ಕಾನೂನು ಏನು ಎಂದೇ ಗೊತ್ತಿಲ್ಲ. ಏನೋ ಬ್ರಿಟಿಷರು ಬಂದು ಈತನ ಕಚೇರಿಗೆ ಅರ್ಜಿ ಹಾಕಿಕೊಂಡು ದಾಖಲೆ ಕೇಳಿದ್ದಾರೆ ಎಂದು ತಿಳಿದುಕೊಂಡಿರುವಂತಿದೆ. ಅರ್ಜಿದಾರರ ಗುರುತಿನ ಚೀಟಿಯನ್ನು ಕೇಳಲು ಯಾವ ಕಾನೂನಿನಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇಂತಹ ಧೀರ ಪಂಡಿತರನ್ನು ದೊಡ್ಡ ಹುದ್ದೆಯಲ್ಲಿ ಕೊಳ್ಳಿರಿಸಿರುವುದೇ ಒಂದು ದೊಡ್ಡ ಅಪಯಕಾರಿ ಬೆಳವಣಿಗೆಯಾಗಿದೆ. ನಾಗರೀಕರನ್ನು ಗೌರವಿಸುವ ಸೌಜನ್ಯದಿಂದ ವರ್ತಿಸುವ ಬರಹಗಳು ಇವರ ಕಚೇರಿಯಲ್ಲಿ ಸೃಷ್ಟಿಯಾಗುವುದಿಲ್ಲ ಎಂದು ಕಾಣಿಸುತ್ತದೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555