March 29, 2026
WhatsApp Image 2026-03-18 at 1.31.18 PM

ಕೆಡಿ ಸಿನಿಮಾ   (KD FILM) 

ಕೆಡಿ ಸಿನಿಮಾದ ಅಶ್ಲೀಲ ಸರ್ಸೆ ಸೆರಗ ಹಾಡು ಯೂಟ್ಯೂಬ್‌ನಿಂದ ಡಿಲೀಟ್, ಸಿನಿ ತಂಡಕ್ಕೆ NHRC ನೋಟಿಸ್, ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾ ಹಾಡಿಗೆ ಬಾರಿ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಸಿನಿಮಾ ತಂಡಕ್ಕೆ ಸಂಕಷ್ಟ ತೀವ್ರಗೊಂಡಿದೆ.

ಸರ್ಸೆ ಸೆರಗ ಹಾಡಿಗೆ ಭಾರಿ ವಿರೋಧ

ಕಿವಿಎನ್ ನಿರ್ಮಾಣದ ಬಹುನಿರೀಕ್ಷಿತ ಸಿನಿಮಾ ಕೆಡಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಪ್ರೇಮ್ ನಿರ್ದೇಶನ ಹಾಗೂ ಧ್ರುವ ಸರ್ಜಾ ನಾಯಕ ನಟನಾಗಿ ಕಾಣಿಸಿಕೊಂಡ ಕೆಡಿ ಸಿನಿಮಾದ ಸರ್ಸೆ ಸೆರಗ ಹಾಡು ಭಾರಿ ಕೋಲಾಹಲ ಸೃಷ್ಟಿಸಿದೆ. ಅತ್ಯಂತ ಕೀಳುಮಟ್ಟದ ಹಾಗೂ ಅಶ್ಲೀಲ ಸಾಹಿತ್ಯದ ಹಾಡಿಗೆ ಕನ್ನಡ ಹಾಗೂ ಬಾಲಿವುಡ್‌ನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಹಲವು ಸಿನಿ ದಿಗ್ಗಜರೂ ಈ ಹಾಡಿಗೆ ತೀವ್ರ ಆಕ್ರಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಸೆ ಸೆರಗ ಹಾಡೂ ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ.

ಪ್ರೇಮ್ ವಿರುದ್ಧ ಆಕ್ರೋಶ

ಬೇಡುವೆನು ವರವನ್ನು ಕೊಡುತಾಯಿ ಜನ್ಮವನು ಅನ್ನೋ ತಾಯಿ ಪ್ರೀತಿ ವಾತ್ಸಲ್ಯದ ಕುರಿತ ಹಾಡು ಬರೆದು ಜನರಿಗೆ ಅತೀ ಹೆಚ್ಚು ಇಷ್ಟವಾಗಿದ್ದ ನಿರ್ದೇಶಕ ಪ್ರೇಮ್ ಇದೀಗ ಸರ್ಸೆ ಸೆರಗ ಹಾಡಿನಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರೇಮ್ ಹಾಗೂ ಕನ್ನಡ ಸಿನಿಮಾ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದು ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಶೀಘ್ರದಲ್ಲೇ ಕನ್ನಡ ಹಾಡು ಡಿಲೀಟ್

ಮಾನವ ಹಕ್ಕುಗಳ ಆಯೋಗದ ನೋಟಿಸ್, ಹಲವು ಠಾಣೆಗಳಲ್ಲಿ ದೂರು, ಜೊತೆಗೆ ಕನ್ನಡಿಗರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಕನ್ನಡದಲ್ಲಿರುವ ಸರ್ಸೆ ಸೆರಗ ಹಾಡು ಕೂಡ ಡಿಲೀಟ್‌ ಮಾಡುವ ಸಾಧ್ಯತೆ ಹೆಚ್ಚಿದೆ. ಕಾನೂನು ಸಂಕಷ್ಟ ಹೆಚ್ಚಾಗುತ್ತಿರು ಕಾರಣ ಈ ಹಾಡು ಸಿನಿಮಾದಿಂದಲೇ ಡಿಲೀಟ್ ಆಗುವ ಸಾಧ್ಯತೆ ಹೆಚ್ಚಿದೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555