ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮ
ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳಿಗೆ ತಾಯಂದಿರು ಹಾಗೂ ಹಿರಿಯರು ಸಾಂಪ್ರದಾಯಿಕವಾಗಿ ಅನ್ನವನ್ನು ತಿನ್ನಿಸಿ ಆಶೀರ್ವದಿಸಿದರು. ಮಕ್ಕಳ ಆರೋಗ್ಯಕರ ಬೆಳವಣಿಗೆಗಾಗಿ ಪೌಷ್ಟಿಕ ಆಹಾರದ ಮಹತ್ವದ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ತಾಯಂದಿರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆನಂದ ಮನ್ನಿಕೇರಿ ಮಾತನಾಡಿ,ಆರು ತಿಂಗಳ ನಂತರ ಮಗುವಿಗೆ ತಾಯಿಯ ಎದೆಹಾಲಿನ ಜೊತೆಗೆ ಪೌಷ್ಟಿಕ ಆಹಾರ ನೀಡುವುದು ಅಗತ್ಯ ಎಂದು ತಿಳಿಸಿದರು.ಗರ್ಭಿಣಿಯರು ಹಾಗೂ ತಾಯಂದಿರು ತಮ್ಮ ಆರೋಗ್ಯದ ಮೇಲೂ ಹೆಚ್ಚಿನ ಗಮನ ಹರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ದೊರೆಯುವ ಪೌಷ್ಟಿಕ ಆಹಾರ, ಲಸಿಕೆ ಹಾಗೂ ಆರೋಗ್ಯ ಸೇವೆಗಳ ಸದುಪಯೋಗವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
