ರಾಯಬಾಗ♥
ರಾಯಬಾಗ ತಾಲ್ಲೂಕಿನ ಆರೋಗ್ಯ ಸೇವೆಗಳ ಅಭಿವೃದ್ಧಿ ಹಾಗೂ ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಆರೋಗ್ಯ ರಕ್ಷಾ ಸಮಿತಿಗೆ ನಾಮ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.
ರಾಯಬಾಗದ ಯುನೂಸ್ ನೂರುದ್ದೀನ್ ಅತ್ತಾರ, ಸಿದ್ದೇಶ್ವರ ಸದಾನಂದ ಸನದಿ, ಪರಶುರಾಮ ವಿಠ್ಠಲ ಹಳ್ಳೂರ, ರಾಜು ಗುರುಸಿದ್ದಪ್ಪ ಹುಕ್ಕೇರಿ, ಅನಿಲ ಅಶೋಕ ಶಿರಹಟ್ಟಿ, ಬೆಳಗಾವಿಯ ಮಹೇಶ ಮಹಾದೇವ ಮಾಂಗ, ಕಸ್ತೂರಿ ವಿನೋಬಾ ಬೆಣ್ಣಾಳೆ ಹಾಗೂ ಸುರೇಂದ್ರ ಮಾಯಪ್ಪಾ ತೊಳೆ ಅವರನ್ನು ನಾಮ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ನೂತನವಾಗಿ ನೇಮಕಗೊಂಡ ನಾಮ ನಿರ್ದೇಶಕರು ಆರೋಗ್ಯ ಸಂಸ್ಥೆಗಳ ಅಭಿವೃದ್ಧಿ, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳು ತಲುಪುವಂತೆ ನೋಡಿಕೊಳ್ಳುವುದು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ
