March 29, 2026
WhatsApp Image 2026-03-11 at 1.45.28 PM

ರಾಯಬಾಗ: 

  ರಾಯಬಾಗ:  ಪಟ್ಟಣದ ರಾಯಬಾಗ ಸೈಕ್ಲಿಂಗ್ ಕ್ಲಬ್ ಸದಸ್ಯರು ಮಾನವೀಯ ಸೇವೆಯ ಮೂಲಕ ಸಮಾಜದ ಗಮನ ಸೆಳೆದಿದ್ದಾರೆ.

ಕ್ಯಾನ್ಸರ್ ಪೀಡಿತ ಮಕ್ಕಳ ಆರೈಕೆಗಾಗಿ ಮುಂಬೈನಲ್ಲಿರುವ ದೇಶದ ಅತಿ ದೊಡ್ಡ ಸಂಸ್ಥೆ ‘ಕ್ಯಾನ್‌ಕಿಡ್’ ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ 40 ದಿನಗಳ ಕಾಲ ವಿಶೇಷ ಸೈಕ್ಲಿಂಗ್ ಆಂದೋಲನ ನಡೆಸುತ್ತದೆ. ಈ ಅಭಿಯಾನದಲ್ಲಿ ₹699 ಪಾವತಿಸಿ ಯಾರು ಬೇಕಾದರೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನೋಂದಾಯಿತ ಸದಸ್ಯರು ಸೈಕಲ್ ಚಲಾಯಿಸಿದ ಪ್ರತಿ ಕಿಲೋಮೀಟರ್‌ಗೆ ₹50ರಷ್ಟು ಮೊತ್ತವನ್ನು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ “ಕ್ಯಾನ್‌ಕಿಡ್”ಸಂಸ್ಥೆಗೆ ಅನುದಾನವಾಗಿ ನೀಡಲಾಗುತ್ತದೆ.ಈ ಅನುದಾನದ ಮೂಲಕ ದೇಶದ 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 60 ಕೇಂದ್ರಗಳ ಮೂಲಕ 1.5 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಚಿಕಿತ್ಸೆ ಮತ್ತು ಆರೈಕೆ ಒದಗಿಸಲಾಗುತ್ತಿದೆ.

ಈ ಅಭಿಯಾನದಲ್ಲಿ ಭಾಗವಹಿಸಿರುವ ರಾಯಬಾಗ ಸೈಕ್ಲಿಂಗ್ ಕ್ಲಬ್‌ನ 17 ಮಂದಿ ಸೈಕ್ಲಿಸ್ಟ್‌ಗಳು ಈಗಾಗಲೇ ಸುಮಾರು 12,500 ಕಿಲೋಮೀಟರ್ ಸೈಕಲ್ ಚಲಾಯಿಸಿದ್ದಾರೆ. ಮಾರ್ಚ್ 15ರೊಳಗೆ 15,000 ಕಿಲೋಮೀಟರ್ ಸೈಕಲ್ ಚಲಾಯಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಇದರಿಂದ ಸುಮಾರು ₹7.50 ಲಕ್ಷ ಅನುದಾನವನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಒದಗಿಸುವ ಉದ್ದೇಶ ಹೊಂದಿದ್ದಾರೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555