March 29, 2026
WhatsApp Image 2026-03-10 at 3.24.57 PM

 

ವಸತಿ ಗೃಹಗಳ ಕಾಮಗಾರಿಗೆ ಭೂಮಿ ಪೂಜೆ

ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ 2 ಕೋಟಿ ರು. ವೆಚ್ಚದಲ್ಲಿ 12 ವಸತಿ ಗೃಹಗಳು: ಶಾಸಕ ಐಹೊಳೆ.

ರಾಯಬಾಗ: ಸಾರ್ವಜನಿಕ ಆಸ್ತಿ ಮತ್ತು ನಮ್ಮ ರಕ್ಷಣೆಗಾಗಿ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಠಾಣೆಯ ಆವರಣದಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಶುಕ್ರವಾರ ಪಟ್ಟಣದ ಪೊಲೀಸ ಠಾಣೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಪೊಲೀಸ ಗೃಹ ಯೋಜನೆಯಡಿ ಮಂಜೂರಾದ 2 ಕೋಟಿ 70 ಲಕ್ಷ ರು. ವೆಚ್ಚದಲ್ಲಿ 12 ಪಿ.ಸಿ. (ಪೊಲೀಸ ಕಾನ್ಹೇಬಲ) ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿದರು.

ಅಥಣಿ ಡಿ.ವೈ.ಎಸ್.ಪಿ ಪ್ರಶಾಂತ ಮುನ್ನೊಳ್ಳಿ ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡಲು ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸಾರ್ವಜನಿಕರು ಪೊಲೀಸರೊಂದಿಗೆ

ಪೊಲೀಸ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಭೂಮಿ ಪೂಜೆ ನೆರವೇರಿಸಿದರು.ಕೈಜೋಡಿಸಿದರೆ, ಕಾನೂನು ಬಾಹಿರ ಚಟುವಟಿಕೆ ನಡೆಸುವ ದುಷ್ಟ ಶಕ್ತಿಗಳನ್ನು ಯಶಸ್ವಿಯಾಗಿ ಮಟ್ಟ ಹಾಕಲು ಸಾಧ್ಯ. ಪೊಲೀಸ ಠಾಣೆ ಆವರಣದಲ್ಲಿ ವಸತಿಗೃಹ ನಿರ್ಮಾಣದಿಂದ ಪೊಲೀಸ ಅಧಿಕಾರಗಳಿಗೆ

ಕಾನೂನು ಬಾಹಿರ ಚಟುವಟಿಕೆ ನಡೆಸುವ ದುಷ್ಟ ಶಕ್ತಿಗಳನ್ನು ಯಶಸ್ಸಿಯಾಗಿ ಮಟ್ಟ ಹಾಕಲು ಸಾಧ್ಯ. ಪೊಲೀಸ ಠಾಣೆ ಆವರಣದಲ್ಲಿ ವಸತಿಗೃಹ ನಿರ್ಮಾಣದಿಂದ ಪೊಲೀಸ ಅಧಿಕಾರಗಳಿಗೆ ಮತ್ತು ಸಿಬ್ಬಂದಿಗೆ ತುಂಬ ಅನುಕೂಲವಾಗಲಿದೆ.

-ಪ್ರಶಾಂತ ಮುನ್ನೊಳ್ಳಿ, ಡಿವೈಎಸ್‌ಪಿ ಅಥಣಿ

ಮತ್ತು ಸಿಬ್ಬಂದಿಗೆ ತುಂಬ ಅನುಕೂಲವಾಗಲಿದೆ ಎಂದರು. ಸಿಪಿಐ ಮಲ್ಲಿಕಾರ್ಜುನ ಡಪಿನ, ಎಇಇ ವೀರಭದ್ರಯ್ಯ, ಸದಾಶಿವ ಘೋರ್ಪಡೆ, ಸುಧಾಕರ ರೆಡ್ಡಿ, ನಿಂಗಯ್ಯಾ ಹಿರೇಮಠ, ಪೊಲೀಸ ಸಿಬ್ಬಂದಿಗಳಾದ ಕೆಂಪಣ್ಣ ಡಬಾಜ,ರವಿ ಭಜಂತ್ರಿ, ಒ ಎಸ್. ಒಡೆಯರ, ಎಸ್ ಎಸ್ ಸಪ್ತಸಾಗರೆ, ರಾಮು ಘಸ್ತಿ, ಎಸ್.ಬಿ.ಸೈದಾಪುರ, ರಾಜು ಪಿಂಜಾರ, ಸಂತೋಷ ದೊಡಮನಿ ಇತರರು ಇದ್ದರು.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555