May 30, 2026
Untitled
ಸಂವಿಧಾನದ 226 ನೇ ವಿಧಿಯು ಕೆಲವು ರಿಟ್‌ಗಳನ್ನು ಹೊರಡಿಸಲು ಹೈಕೋರ್ಟ್‌ ಅಧಿಕಾರದ ಬಗ್ಗೆ ವ್ಯವಹರಿಸುತ್ತದೆ. ಈ ವಿಷಯದಲ್ಲಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ವಿಚಾರಣೆಯನ್ನು ಸಹ ಪೀಠ ತಡೆಹಿಡಿದಿದೆ.

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತು ವೇಳೆ ಹಾಜರಾಗದಂತೆ ಟಿವಿಕೆ ಶಾಸಕ ಆರ್ ಶ್ರೀನಿವಾಸ ಸೇತುಪತಿ ಅವರನ್ನು ತಡೆದಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆ ನೀಡಿದೆ.

•  ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ವಿಜಯ್ ಬಿಷ್ಣೋಯ್ ಅವರನ್ನೊಳಗೊಂಡ ನ್ಯಾಯಪೀಠ, ಕನಿಷ್ಠವಾಗಿ ಹೇಳುವುದಾದರೆ ಇದು ಅಮಾನವೀಯ ನಡೆಯಾಗಿದೆ. ಚುನಾವಣಾ ಅರ್ಜಿಯೇ ಪರಿಹಾರ ಎಂದು ಹೈಕೋರ್ಟ್ ಹೇಳುತ್ತದೆ. ಆದರೆ ಆರ್ಟಿಕಲ್ 226 ರ ಅರ್ಜಿಯನ್ನು ಇನ್ನೂ ಪರಿಗಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

•  ಸಂವಿಧಾನದ 226 ನೇ ವಿಧಿಯು ಕೆಲವು ರಿಟ್‌ಗಳನ್ನು ಹೊರಡಿಸಲು ಹೈಕೋರ್ಟ್‌ ಅಧಿಕಾರದ ಬಗ್ಗೆ ವ್ಯವಹರಿಸುತ್ತದೆ. ಈ ವಿಷಯದಲ್ಲಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ವಿಚಾರಣೆಯನ್ನು ಸಹ ಪೀಠ ತಡೆಹಿಡಿದಿದೆ.

 

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555