ರಾಯಬಾಗ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪ್ರಚಾರ ಚುರುಕುಗೊಂಡಿದ್ದು, ಕಾರ್ಯ ವಕೀಲ ನಾರಾಯಣಸ್ವಾಮಿ ಅವರು ರಾಯಬಾಗ ಪಟ್ಟಣಕ್ಕೆ ಭೇಟಿ ನೀಡಿ ಮತಯಾಚಿಸಿದರು.
ಗ್ರಾಮೀಣ ಪ್ರದೇಶದ ವಕೀಲರು ಎದುರಿಸುತ್ತಿರುವ ಸಮಸ್ಯೆಗಳಿಗೆ ದೀರ್ಘಕಾಲಿಕ ಪರಿಹಾರ ಕಲ್ಪಿಸುವುದು, ನ್ಯಾಯಾಲಯಗಳಲ್ಲಿ ಅಗತ್ಯ ಮೂಲ.
ಹಾಗೂ ಸೌಲಭ್ಯ ವೃದ್ಧಿಸುವುದು ನ್ಯಾಯ ವ್ಯವಸ್ಥೆಯ ಮೇಲಿನ ಜನರ ನಂಬಿಕೆ ಗಟ್ಟಿಗೊಳಿಸುವುದೇ ತಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಕೃಷ್ಣಾ ಕೋಟಿವಾಲೆ,ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷರಾದ ಅನಿಲ್ ಶೆಟ್ಟಿ, ಶಿವಾನಂದ ಬಂತೆ ರಾಕೇಶ್ ಅವಳೆ,ಅನಿಲ ಕೊರವಿ,ವಿಠಲ ಹೆಗಡೆ ರಾಹುಲ್‌ಶೆಟ್ಟಿ , ಬೀಮು ಚೌಗಲಾ, ಭೈರು ಮಾನಕಾಪುರ ಹಾಜರಿದ್ದರು.