May 30, 2026
WhatsApp Image 2026-04-13 at 2.57.38 PM

ಬೆಳಗಾವಿ

ಬೆಳಗಾವಿ: ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಎನ್.ಎ. ಕ್ರಾಂತಿ ಅವರ ನಿರ್ದೇಶದ ಮೇರೆಗೆ ಕಾಕತಿ ವಲಯದ ಭೂತರಾಮನಹಟ್ಟಿ ಅರಣ್ಯ ಪ್ರದೇಶದಲ್ಲಿ ತಡರಾತ್ರಿ ಅರಣ್ಯ ಇಲಾಖೆ ದಾಳಿ ನಡೆಸಿ, ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದ್ದ ನಿಲಗಿರಿ ಮರಗಳ ಮಾಲನ್ನು ವಾಹನ ಸಮೇತ ಜಪ್ತಿ ಮಾಡಲಾಗಿದೆ.

ರಾಜನಕಟ್ಟಿ ಗ್ರಾಮದ ಯಲ್ಲಪ್ಪಾ ಚಂದ್ರಪ್ಪಾ ಡುಮ್ಮನಾಯಕ ಹಾಗೂ ಬೆನಕನಹೊಳೆ ಗ್ರಾಮದ ಮಲ್ಲೇಶ ಮೇಖಲಿ ಎಂಬುವರು ನಿಲಗಿರಿ ಮರಗಳನ್ನು ಕಡಿದು, TATA 407 (KA-22 B-1533) ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿ ಹಿಡಿದಿದ್ದಾರೆ.
ಈ ಸಂಬಂಧ ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ಕರ್ನಾಟಕ ಅರಣ್ಯ ನಿಯಮಗಳು 1969ರಡಿ ಕಾಕತಿ ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದ್ದು, ಬೆನಕನಹೊಳೆ ಗ್ರಾಮದಲ್ಲಿ ದಾಸ್ತಾನು ಮಾಡಲಾಗಿದ್ದ ನಿಲಗಿರಿ ಮಾಲನ್ನೂ ಅಧಿಕಾರಿಗಳು ಜಪ್ತಿ ಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ACF ಶ್ರೀ ನಾಗರಾಜ ಬಾಳೆಹೊಸೂರು, RFO ಶ್ರೀ ಶಿವಕುಮಾರ ಮಾಳಿ, DRFO ಶ್ರೀ ಆನಂದ ಜಯಗೌಡರ, ಬೀಟ್ ಫಾರೆಸ್ಟರ್‌ಗಳಾದ ರಾಹುಲ್ ಬೋಂಗಾಳೆ, ಶಂಕರ ಮನವಾಡಿ, ಚಾಮರಾಜ ಮುರುಗೋಡ, ರವಿ ಕಿಲಾರಿ, ಮಂಜುನಾಥ ಓಸಿ ಹಾಗೂ ಇತರೆ ಸಿಬ್ಬಂದಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555