May 30, 2026
WhatsApp Image 2026-04-11 at 5.29.54 PM

ಬೆಳಗಾವಿ

• ಬೆಳಗಾವಿ ತಲುಪಿದ ಹೊಸ ಹಲ್ಮಿಡಿ ಶಾಸನ
• ಇಂದು ಡಿಸಿ ಕಚೇರಿ ಆವರಣದಲ್ಲಿ ಶಾಸನ ಸ್ಥಾಪನೆ
• ಕನ್ನಡ ಸಂಘಟನೆಗಳ ಹೋರಾಟಕ್ಕೆ ಸಂದ ಜಯ
• ಮುಂದಿನ ವಾರ ಶಾಸನಕ್ಕೆ ಪವಿತ್ರ ಕ್ಷೀರಾಭಿಷೇಕ

2024 ರ ನವೆಂಬರ್ ಒಂದರಂದು ಕರ್ನಾಟಕ ರಾಜ್ಯೋತ್ಸವ ದಿನದಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸ್ಥಾಪನೆಯಾಗಿ ಇತೀಚೆಗೆ ಒಡೆದು ಹಾಕಲ್ಪಟ್ಟಿದ್ದ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನದ ಹೊಸ ಪ್ರತಿಕೃತಿಯು ಇಂದು ಶುಭ
ಶುಕ್ರವಾರ ಬೆಳಗಾವಿಗೆ ತಲುಪಿದೆ.

ನಾಳೆ ಇಂದು ಶನಿವಾರ ಮುಂಜಾನೆ ಇದನ್ನು ತಳಕಟ್ಟೆಯ ಮೇಲೆ ಸ್ಥಾಪಿಸುವ ಕಾರ್ಯ ನಡೆಯಲಿದೆ. ಮುಂದಿನ ವಾರ ಸಮಾನ ಮನಸ್ಕರು ಕನ್ನಡ ಸಂಘಟನೆಗಳು ನೂತನ ಶಾಸನಕ್ಕೆ ಜಲಾಭೀಷೇಕ ಮತ್ತು ಕ್ಷೀರಾಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಲಿವೆ.ಹಲ್ಮಿಡಿ ಶಾಸನವನ್ನು ಡಿಸಿ ಕಚೇರಿಯ ನವೀಕರಣದ ಭರದಲ್ಲಿ ಒಡೆದು ಹಾಕಲಾಗಿತ್ತು. ಶಾಸನವನ್ನು ಹುಡುಕಾಡಿದ ಕನ್ನಡ ಸಂಘಟನೆಗಳಿಗೆ ಆಘಾತ ಕಾದಿತ್ತು. ಶಾಸನ ಒಡೆದು ಹೋಗಿ ತಳಕಟ್ಟೆಯು ಮಾತ್ರ ಕಸದಲ್ಲಿ ಬಿದ್ದಿತ್ತು.ಕಳೆದ ಮಾರ್ಚ23 ರಂದು ಕನ್ನಡ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿದ್ದವು.ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜಿಲ್ಲಾಆಡಳಿತ ಹೊಸ ಪ್ರತಿಕೃತಿ ಕೂಡಿಸಲು ಕ್ರಮ ಕೈಕೊಂಡಿತ್ತು.

 

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555