ಚಿಂಚಲಿ♥
ರಾಯಬಾಗ: ಉಗರ ಖುರ್ದದಲ್ಲಿರುವ ಸ್ವಸ್ತಿ–ಕುಬೇರ ಸೌಹಾರ್ದ ಸಹಕಾರಿ ಸಂಘದ ಚಿಂಚಲಿ ಶಾಖೆಯನ್ನು ಶಾಸಕರಾದ ಡಿ.ಎಂ. ಐಹೊಳೆ ಶನಿವಾರ ಉದ್ಘಾಟಿಸಿದರು
ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಸಹಾಯ, ಸ್ವಾವಲಂಬನೆ ಹಾಗೂ ಸಣ್ಣ ಉದ್ಯಮಗಳ ಅಭಿವೃದ್ಧಿಗೆ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಬ್ಯಾಂಕಿಂಗ್ ಸೌಲಭ್ಯಗಳಿಂದ ದೂರವಿರುವ ಜನರಿಗೆ ಇಂತಹ ಸಂಘಗಳು ಆಧಾರವಾಗಿದ್ದು, ರೈತರು, ಕೂಲಿ ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ನೆರವಾಗಬೇಕು ಎಂದು ತಿಳಿಸಿದರು.
ಸಂಘದ ಕಾರ್ಯಚಟುವಟಿಕೆಗಳು ಪಾರದರ್ಶಕವಾಗಿ ನಡೆಯಬೇಕು ಹಾಗೂ ಸದಸ್ಯರ ವಿಶ್ವಾಸ ಗಳಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಶಾಖೆಯ ಮೂಲಕ ಸ್ಥಳೀಯರಿಗೆ ಸಾಲಸೌಲಭ್ಯ, ಉಳಿತಾಯ ಪ್ರೋತ್ಸಾಹ ಹಾಗೂ ವಿವಿಧ ಆರ್ಥಿಕ ಯೋಜನೆಗಳ ಅನುಕೂಲ ದೊರಕಲಿ ಎಂದು ಆಶಿಸಿದರು.
ಚಿಂಚಲಿ ಪಟ್ಟಣದ ಮಲ್ಲಿಕಾರ್ಜುನ ಗುರುದೇವ ಆಶ್ರಮದ ಪ.ಪೂ.ಸಿದ್ದಪ್ರಸಾದ ಸ್ವಾಮೀಜಿ, ಸ್ವಸ್ತಿ ಕುಬೇರ ಬ್ಯಾಂಕ್ ನ ಸಂಸ್ಥಾಪಕ ಅಧ್ಯಕ್ಷ ರಜನಿಕಾಂತ ಶಹಾ, ತೃಪ್ತಿ ಕಾಗೆ, ಭೂಷಣ ಶಹಾ, ಅಂಕುಶ ಜಾಧವ, ನಾನಾಸಾಬ ಸೌಂದಲಗಿ, ಗಜಾನನ ನಾಯಿಕ,ಸಂದೇಶ ಶೆಟ್ಟಿ, ವಸಂತ ಖೋತ,ಮಹಾದೇವ ದಂಡಾಪುರೆ,ಸದಾಶಿವ ನಿಡವಣಿ ಸೇರಿದಂತೆ ಇತರರು ಇದ್ದರು.
