November 9, 2026
WhatsApp Image 2026-09-04 at 11.16.10 AM

ರಾಯಬಾಗ:

•  ತಾಲೂಕಿನ ಇಟ್ನಾಳ್ ಗ್ರಾಮದ ಹನಗಂಡಿ ಕುಟುಂಬದಲ್ಲಿ ಅಪರೂಪದ ಹಾಗೂ ಹರ್ಷದಾಯಕ ಘಟನೆಯೊಂದು ನಡೆದಿದ್ದು, ಒಂದೇ ಹೆರಿಗೆಯಲ್ಲಿ ಮೂರು ಗಂಡು ಮಕ್ಕಳು ಜನ್ಮತಾಳಿದ್ದಾರೆ.

•  ಇಟ್ನಾಳ್ ಗ್ರಾಮದ ನಿವಾಸಿಗಳಾದ ಲಕ್ಷ್ಮಣ್ ಹನಗಂಡಿ ಹಾಗೂ ಲಕ್ಷ್ಮಿ ಹನಗಂಡಿ ದಂಪತಿಗೆ ನೆರೆಯ ಮಹಾಲಿಂಗಪುರದ ‘ಅರಶಿನಗುಡಿ ಆಸ್ಪತ್ರೆ’ಯಲ್ಲಿ ಯಶಸ್ವಿ ಹೆರಿಗೆಯಾಗಿದ್ದು, ತಾಯಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಪ್ರಸ್ತುತ ತಾಯಿ ಹಾಗೂ ಮೂರೂ ನವಜಾತ ಶಿಶುಗಳು ಸಂಪೂರ್ಣ ಆರೋಗ್ಯವಾಗಿದ್ದು, ವೈದ್ಯರ ಆರೈಕೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

•  ಒಂದೇ ಸಮಯದಲ್ಲಿ ಮೂರು ಗಂಡು ಮಕ್ಕಳು ಜನಿಸಿದ ಸುದ್ದಿ ತಿಳಿಯುತ್ತಿದ್ದಂತೆ ಹನಗಂಡಿ ಕುಟುಂಬದಲ್ಲಿ ಹಾಗೂ ಇಟ್ನಾಳ್ ಗ್ರಾಮದಲ್ಲಿ ಸಂತಸದ ವಾತಾವರಣ ಮನೆಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಗ್ರಾಮಸ್ಥರು ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಪರೂಪದ ಈ ಸವಾಲಿನ ಹೆರಿಗೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅರಶಿನಗುಡಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗಕ್ಕೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *