May 30, 2026
WhatsApp Image 2026-04-27 at 4.11.14 PM

ಭ್ರಷ್ಟ ಮತ್ತು ನಾಜೂಕು ರಾಜಕಾರಣಿ ರಾಮಲಿಂಗಾರೆಡ್ಡಿಯು ಎಂಟು ವರ್ಷಗಳ ಹಿಂದೆ (2018ರಲ್ಲಿ) ತಾನು ಗೃಹಮಂತ್ರಿಯಾಗಿದ್ದಾಗ ಕರ್ತವ್ಯಲೋಪವೆಸಗಿ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ತನ್ನ ಅಧೀನ ಗುಲಾಮ ಪೊಲೀಸರಿಂದ ನನ್ನ ಮೇಲೆ ಹಾಕಿಸಿದ್ದ ಸುಳ್ಳು ದೂರಿನ ಕ್ರಿಮಿನಲ್ ಪ್ರಕರಣ ಇಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ಈ ಪ್ರಕರಣದಲ್ಲಿ ಸುಮಾರು 27 ಜನ ಸಾಕ್ಷಿಗಳಿದ್ದು, ಅದರಲ್ಲಿ 20+ ಜನ ಪೊಲೀಸ್ ಅಧಿಕಾರಿಗಳೇ ಇದ್ದಾರೆ. ಆರೋಪಿ ಮಾತ್ರ ನಾನೊಬ್ಬನೇ! ನಾನು ಇನ್ನೆಂತಹ ಏಕಾಂಗಿ/ಒಂಟಿ ಉಗ್ರ/ಭಯೋತ್ಪಾದಕನಿರಬಹುದು!?

• ಆದರೆ ಇಂದೂ ಸಹ ಈ ಪ್ರಕರಣದಲ್ಲಿ ಸಾಕ್ಷ್ಯ ಹೇಳಲು ಸಾಕ್ಷಿಗಳು ಬರಲಿಲ್ಲ. ಅದರಲ್ಲಿ 5 ಜನರಿಗೆ NBW ಆಗಿದೆ. ಐವರಿಗೆ ಸಮನ್ಸ್ ಜಾರಿಯಾಗಿದೆ. ಆದರೂ ಅವರು ಬರುತ್ತಿಲ್ಲ. ನಾನು ಮಾತ್ರ ನಿಯತ್ತಾಗಿ ಹೋಗಿ ಕಟಕಟೆಯಲ್ಲಿ ನಿಂತು ಬರುತ್ತಿದ್ದೇನೆ. ಇದೇ ನಮಗೆ ಶಿಕ್ಷೆ.

•  ನಮ್ಮ ದೇಶದ ನ್ಯಾಯಾಂಗವು ತಪ್ಪಿತಸ್ಥ ಅಪರಾಧಿಗಳಿಗೆ ಶಿಕ್ಷೆ ನೀಡುವಲ್ಲಿ ಅದೆಷ್ಟು ಯಶಸ್ವಿಯಾಗಿದೆಯೋ ಗೊತ್ತಿಲ್ಲ, ಆದರೆ ನಿರಪರಾಧಿಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಶಿಕ್ಷೆ ನೀಡುವುದರಲ್ಲಿ ಮಾತ್ರ ಬಹಳ ಮುಂದಿದೆ.

•  ಈ ಪ್ರಕರಣದಲ್ಲಿ ಖ್ಯಾತ ವಕೀಲರಾದ ದೊರೈರಾಜು ನನ್ನ ಪರವಾಗಿ pro bono ವಾದಿಸುತ್ತಿದ್ದಾರೆ. ಅವರಿಗೆ ಧನ್ಯವಾದಗಳು. KRS ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಯೂ ಆಗಿರುವ ವಕೀಲ ಆರೋಗ್ಯಸ್ವಾಮಿ ಇಂದು ನ್ಯಾಯಾಲಯದಲ್ಲಿ ಜೊತೆಗಿದ್ದರು. ಅವರಿಗೂ ಧನ್ಯವಾದಗಳು.

•  ಈ ಮಧ್ಯೆ ನನ್ನ ಮೇಲಿನ ವೃಥಾರೋಪದ ಒಂದೆರಡು ಪ್ರಕರಣಗಳು ಹೈಕೋರ್ಟ್ ಮೆಟ್ಟಲೇರಿವೆ. ಕೆಲವು ರದ್ದಾಗಿವೆ. ಇನ್ನೂ ಕೆಲವು ಗೊತ್ತಿಲ್ಲದ ಪ್ರಕರಣಗಳು ಧುತ್ತನೆ ಎದ್ದು ಬರುತ್ತಿವೆ. ಹೀಗೆ 12-14 ಪ್ರಕರಣಗಳಲ್ಲಿ ನಾನು ನ್ಯಾಯಾಲಯಕ್ಕೆ ಎಡತಾಕುತ್ತಿದ್ದೇನೆ. ನಾಳೆಯೂ ಒಂದು ಪ್ರಕರಣವಿದೆ. ಅದಂತೂ 11+ ವರ್ಷಗಳಷ್ಟು ಹಳೆಯ ಮೊಕದ್ದಮೆ. ಅದರ ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಮಾತನಾಡಬಾರದು. ವಿಚಾರ ಅಷ್ಟು ಕೆಟ್ಟದಾಗಿದೆ. “ನ್ಯಾಯಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ.”

•  ಕಾನೂನು ಉಲ್ಲಂಘಿಸುವ ಪುಂಡರು, ಪೋಕರಿಗಳು, ಭ್ರಷ್ಟರು, ಜನದ್ರೋಹಿಗಳು ಆರಾಮಾಗಿದ್ದಾರೆ. ಆದರೆ ಕಾನೂನು ಪಾಲಿಸುವವರ ಕಷ್ಟ, ನಷ್ಟ ಒಂದೆರಡಲ್ಲ. ಆದರೂ ನಾವು ಕಾನೂನು ಪಾಲಿಸೋಣ. ನ್ಯಾಯಕ್ಕಾಗಿ ಹೋರಾಡೋಣ. ಪ್ರಜಾಪ್ರಭುತ್ವ ಬಲಗೊಳಿಸೋಣ. *ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.

•  (ನನ್ನ ಮೇಲಿರುವ ಹಲವು ಸುಳ್ಳು ಕೇಸುಗಳು ಮತ್ತು ನಮ್ಮ ನ್ಯಾಯಾಂಗದ ಹೋರಾಟದ ಕುರಿತು ಹಲವು ವಿವರಗಳನ್ನು ಹಿಂದೆ ಹಲವು ಬಾರಿ ಬರೆದಿದ್ದೇನೆ. ಆಸಕ್ತರು #ಕೋರ್ಟಿನಕಟಕಟೆಯಲ್ಲಿ hashtag ಮೇಲೆ ಕ್ಲಿಕ್ ಮಾಡಿದರೆ ಹಿಂದಿನ ಲೇಖನಗಳು ಸಿಗುತ್ತವೆ.)

 

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555