ನಾರಿ ಶಕ್ತಿ ವಿರೋಧಿಸಿದ ಕಾಂಗ್ರೆಸ್ ವಿರುದ್ದ ನಾರಿ ಶಕ್ತಿ ಫೋರಂನ ವತಿಯಿಂದ ಪ್ರತಿಭಟನೆ.
ಬೆಳಗಾವಿ : ೧೨ ನೇ ಶಮಾನದಲ್ಲಿ ವಿಶ್ವ ಗುರು ಬಸವಣ್ಣವನ್ನು ಮಹಿಳೆಯರಿಗಾಗಿ ಮೀಸಲಾತಿಯನ್ನು ನೀಡಿದ್ದರು, ಆದರೆ ೨೧ ನೇ ಶತಮಾಣದಲ್ಲಿಯೂ ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷವು ಮಹಿಳೆಯರನ್ನು ಕಡೆಗಣನೆ ಮಾಡಿಕೊಂಡು ಬರುತ್ತಿದೆ. ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಜಾರಿಯಾಗದಂತೆ ತಡೆದು ಕಾಂಗ್ರೇಸ್ ಮತ್ತು ಮಿತ್ರ ಪಕ್ಷಗಳ ಮಹಿಳಾ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ನಾರಿ ಶಕ್ತಿ ಫೋರಂನ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು.

ಶನಿವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿನೂರಾರು ಮಹಿಳಾ ಕಾರ್ಯಕರ್ತರು ಜಮಾವನೆ ಕೊಂಡು, ನಾರಿ ಶಕ್ತಿ ಫೋರಂನ ವತಿಯಿಂದ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಜಾರಿಯಾಗದಂತೆ ತಡೆದು ಕಾಂಗ್ರೇಸ್ ಮತ್ತು ಮಿತ್ರ ಪಕ್ಷಗಳ ಮಹಿಳಾ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಪ್ರತಿಭಟನಾ ರ್ಯಾ ಲಿಯನ್ನು ನಡೆಸಿದರು.
ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮಹಿಳಾ ವಿರೋಧಿ ಹಾಗೂ ಭ್ರಷ್ಟ ಕಾಂಗ್ರೆಸ್ ಪಾರ್ಟಿ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿ ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಪ್ರಧಾನ ಮಂತ್ರಿ ಮೋದಿ ಸೇರಿದಂತೆ ಎನ್.ಡಿ.ಎ ಸರ್ಕಾರವು ಮಹಿಳೆಯನ್ನು ಕೆಳಮಟ್ಟದಿಂದ ಮೇಲಕ್ಕೆತ್ತಿ, ಮಹಿಳೆಗೆ ರಾಜಕೀಯ ಬಲವನ್ನು ತುಂಬುವ ಮಹದಾಸೆಯನ್ನು ಹೊಂದಿದ್ದರು. ಆದರೇ, ಅದಕ್ಕೆ ಈ ಕಾಂಗ್ರೆಸ್ ನಿಂದ ಸೋಲಾಗಿದ್ದು, ಹೋರಾಟದ ಮೂಲಕ ಪಡೆಯುವ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು.
ಸಂವಿಧಾನದಲ್ಲಿ ಲಿಂಗ ತಾರತಮ್ಯ ಮಾಡದಂತೆ ಹೇಳಲಾಗಿದೆ. 7 ದಶಕಗಳು ದಾಟಿದರೂ ಮಹಿಳೆಯರಿಗೆ ರಾಜಕೀಯ ಅಸ್ತಿತ್ವ ದೊರೆತಿಲ್ಲ ಬೇಸರವನ್ನು ವ್ಯಕ್ತಪಡಿಸಿದರು.
ಇದೇ ವೇಳೆ ಇನ್ನೋರ್ವ ಪ್ರತಿಭಟನಾಕಾರರು ಮಾತನಾಡಿ ಎಲ್ಲಿ ಹೆಣ್ಣು ಇರುತ್ತಾಳೋ ಅಲ್ಲಿ ಲಕ್ಷ್ಮೀ ವಾಸಿಸುತ್ತಾಳೆ. ನಾರಿಗೆ ನಮ್ಮ ದೇಶದಲ್ಲಿ ತನ್ನದೇಯಾದ ಮಹತ್ವವಿದೆ. ಆದರೇ, ಈ ದೇಶದಲ್ಲಿ ಶೇ. 33 ರಷ್ಟು ಸ್ಥಾನ ಸಿಗುತ್ತದೆ ಎಂದಾಗ ಮಹಿಳಾ ವರ್ಗಕ್ಕೆ ತುಂಬ ಖುಷಿಯಾಗಿತ್ತು. ಆದರೆ ಈಗ ನಿರಾಸೆಯಾಗಿದೆ ಎಂದರು.
ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬಟ್, ಮಹಾನಗರ ಅಧ್ಯಕ್ಷೆ ಗೀತಾ ಸುತಾರ್, ಶಿಲ್ಪಾ ಕೆಕ್ಕೆ, ಡಾ. ನಯನಾ ಭಸ್ಮ ಹಾಗೂ ಉಜ್ವಲಾ ಬಡವನ್ನಾಚೆ ಸೇರಿದಂತೆ ಕಾರ್ಯಕರ್ತರು ಇದ್ದರು.
