ಬುದ್ಧ ಕಬೀರ್ ಫುಲೆ ಅಂಬೇಡ್ಕರ್ ಗುರುಗಳು : ಡಾ. ಯಲ್ಲಪ್ಪ ಹಿಮ್ಮಡಿ

ರಾಯಬಾಗ – 19 :
ಅಂಬೇಡ್ಕರ್ ಅವರು ಬುದ್ದ ಕಬೀರ್ ಮತ್ತು ಜ್ಯೋತಿಬಾ ಫುಲೆ ಅವರನ್ನು ತಮ್ಮ ಗುರುಗಳೆಂದು, ವಿದ್ಯೆ ಸ್ವಾಭಿಮಾನ ಮತ್ತು ಶೀಲವನ್ನು ತಮ್ಮ ದೇವರುಗಳೆಂದು, ಅವರಿಂದ ತಮ್ಮ ಜೀವನ ರೂಪುಗೊಂಡಿದೆಯೆಂದು ಘೋಷಿಸಿದ್ದಾರೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು. ಇಲ್ಲಿಗೆ ಸಮೀಪದ ಯಲ್ಪಾರಟ್ಟಿ ಬಂಗ್ಲೆಯ ಪ್ರವಾಸಿ ಮಂದಿರದಲ್ಲಿ ಬೆಳಗಾವಿ ಜಿಲ್ಲಾ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್ ಅವರ 135 ಜಯಂತ್ಯುತ್ಸವದಲ್ಲಿ ಅತಿಥಿಯಾಗಿ ಮಾತನಾಡಿದರು.
ತಾನು ಮೂವರು ಗುರುಗಳ ವಿಚಾರಪ್ರಣಾಲಿಯಿಂದ ಸಾಮಾಜಿಕ, ರಾಜಕೀಯ ಹಕ್ಕುಗಳಿಗಾಗಿ ಹೋರಾಡಿದ್ದರೆ, ಈ ಮೂವರು ದೇವರುಗಳಿಂದ ನೈತಿಕ ವ್ಯಕ್ತಿತ್ವ ರೂಪಿಸಿಕೊಂಡಿದ್ದಾಗಿ ಅಂಬೇಡ್ಕರ್ ಹೇಳಿರುವರು. ಸಾರ್ವಜನಿಕ ಬದುಕು ಮತ್ತು ವ್ಯಕ್ತಿ ಸಂಪತ್ತು ಶುದ್ಧವಾಗಿರಬೇಕೆಂಬುದು ಅವರ ಧ್ಯೇಯವಾಗಿತ್ತು. ಅಂಬೇಡ್ಕರ್ ಅವರ ಈ ಎರಡೂ ಸಿದ್ದಾಂತಗಳು ಘನತೆಯಿಂದ ಬದುಕುವ ಸಾಧಕರೆಲ್ಲರಿಗೆ ಸೈದ್ಧಾಂತಿಕ ಮಾದರಿಯಾಗಿವೆ ಎಂದು ಡಾ. ಹಿಮ್ಮಡಿ ಪ್ರತಿಪಾದಿಸಿದರು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತ ಗಾಣಿಗೇರ ಪ್ರಾಸ್ತಾವಿಕ ಮಾತನಾಡಿದರು. ನಾಗೇಶ ಕಾಮಶೆಟ್ಟಿ, ತಮ್ಮಣ್ಣಾ ಗಾಣಿಗೇರ, ಮಹಾವೀರ ಹುಲ್ಲೆನ್ನವರ ಮಾತನಾಡಿದರು. ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾರುತಿ ಅಕ್ಕೆನ್ನವರ ಅಧ್ಯಕ್ಷೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹನುಮಂತ ಎಸ್ ಅಕ್ಕೆನ್ನವರ, ದುರ್ಗಪ್ಪ ತುಳಸಿಗೇರಿ, ಸುನೀಲ್ ಹುಲ್ಲೆನ್ನವರ, ಉದಯ್ ಗಾಣಿಗೇರ, ಅಲಗೊಂಡ ಹುಲ್ಲೆನ್ನವರ ರಾಮಕೃಷ್ಣ ಹುಲ್ಲೆನ್ನವರ, ಸಂತೋಷ್ ಮೇಚನ್ನವರ, ರಾಮಾಚಾರಿ ಸಣ್ಣಕ್ಕಿನವರ, ಗೋವಿಂದ ಗುಡದಾರ, ಯಲ್ಲೂ ಗಾಣಿಗೇರ, ಭೀಮಸೇನ ತುಳಸಿಗೇರಿ, ತಮ್ಮಾಣಿ ತುಳಸಿಗೇರಿ, ಸದಾಶಿವ ಹುಲ್ಲೆನ್ನವರ, ಆಕಾಶ ಗಾಣಿಗೇರ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಯಲ್ಲಪ್ಪ ಹಿಮ್ಮಡಿ ಅವರ ‘ವಿವೇಕಾನಂದ – ಅಂಬೇಡ್ಕರ್ ಧಾರ್ಮಿಕ ವಿಚಾರಧಾರೆ’ ಕೃತಿಯ ಪ್ರತಿಗಳನ್ನು ವಿತರಿಸಲಾಯಿತು. ಆರಂಭದಲ್ಲಿ ಸದಾಶಿವ ಗಾಣಿಗೇರ ಮತ್ತು ಮಹೇಂದ್ರ ಗಾಣಿಗೇರ ಭೀಮಗೀತೆ ಹಾಡಿದರು. ಲಕ್ಷ್ಮಣ ಎಸ್ ಅಕ್ಕೆನ್ನವರ ಸ್ವಾಗತಿಸಿದರು, ರಾಮು ಗಾಣಿಗೇರ ವಂದಿಸಿದರು, ಮುತ್ತಪ್ಪ ಗಾಣಿಗೇರ ನಿರೂಪಿಸಿದರು.
