May 30, 2026
IMG_20260408_205352

ಬೆಳಗಾವಿ

•  ಯೆಳ್ಳೂರು ಗ್ರಾಮಸ್ಥರಿಗೆ ಸಿಕ್ಕಿತು ನ್ಯಾಯದ ಜಯ

•  ಹತ್ತು ವರ್ಷಗಳ ಕಾನೂನು ಹೋರಾಟ ಅಂತ್ಯ

•  ಎಲ್ಲಾ ಏಳು ಪ್ರಕರಣಗಳಿಂದಲೂ ಆರೋಪಿಗಳು ಮುಕ್ತ

• ಗ್ರಾಮಸ್ಥರಲ್ಲಿ ಪಾರವೇ ಇಲ್ಲದ ಸಂಭ್ರಮ

•  ಬೆಳಗಾವಿಯ ಯೆಳ್ಳೂರಿನಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ‘ಮಹಾರಾಷ್ಟ್ರ ರಾಜ್ಯ ಯೆಳ್ಳೂರ’ ಫಲಕ ವಿವಾದಕ್ಕೆ ಸಂಬಂಧಿಸಿದಂತೆ ಈಗ ಮಹತ್ವದ ತೀರ್ಪು ಹೊರಬಿದ್ದಿದೆ. ಅಂದು ಗ್ರಾಮಸ್ಥರ ಮೇಲೆ ದಾಖಲಾಗಿದ್ದ ಎಲ್ಲಾ ಏಳು ಪ್ರಕರಣಗಳಲ್ಲಿಯೂ ಇದೀಗ ನ್ಯಾಯಾಲಯವು ಎಲ್ಲರನ್ನೂ ನಿರ್ದೋಷಿಗಳೆಂದು ಘೋಷಿಸಿದ್ದು, ಮರಾಠಿ ಭಾಷಿಕರ ಕಾನೂನು ಹೋರಾಟಕ್ಕೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.

  27  ಜುಲೈ 2014 ರಂದು ಯೆಳ್ಳೂರಿನಲ್ಲಿ ‘ಮಹಾರಾಷ್ಟ್ರ ರಾಜ್ಯ’ ಎಂಬ ಫಲಕವನ್ನು ತೆರವುಗೊಳಿಸಿದ ಹಿನ್ನಲೆ ದೊಡ್ಡ ಮಟ್ಟದ ಗದ್ದಲ ನಡೆದಿತ್ತು. ಈ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರದ ನಂತರ ಗ್ರಾಮಸ್ಥರ ಮೇಲೆ ಒಟ್ಟು 7 ಪ್ರಕರಣಗಳು ದಾಖಲಾಗಿದ್ದವು. ಈ ಹಿಂದೆ 5 ಪ್ರಕರಣಗಳಲ್ಲಿ ಆರೋಪಿಗಳು ಖಲಾಸೆಯಾಗಿದ್ದರು, ಇಂದು ಉಳಿದ 2 ಪ್ರಮುಖ ಪ್ರಕರಣಗಳಲ್ಲೂ ನ್ಯಾಯಾಲಯವು ಎಲ್ಲರನ್ನೂ ನಿರ್ದೋಷಿಗಳೆಂದು ಘೋಷಿಸಿದೆ. ಪ್ರಕರಣ ಸಂಖ್ಯೆ 122/2015 ರಲ್ಲಿ ಅರ್ಜುನ ಗೋರಲ್, ರಮೇಶ ಘಾಡಿ, ನಂದು ಕುಗಜಿ, ಮಾರುತಿ ದೇಸಾಯಿ, ಪಿಂಟು ಧಾಮಣೇಕರ್, ಬಸವಂತ ಲೋಹಾರ್, ಶ್ರೀಕಾಂತ್ ನಂದುಡ್ಕರ್, ಸಾಗರ ಕಾಕತ್ಕರ್, ಅಮಿತ್ ಜಾಧವ್, ಮನೋಹರ್ ಕುಂಡೇಕರ್, ವಿಠ್ಠಲ್ ಕುರಂಗಿ, ಶಂಕರ್ ಕಣಬರ್ಕರ್, ಪರಶುರಾಮ್ ಕಂಗ್ರಾಳ್ಕರ್, ಅನಂತ್ ಕಂಗ್ರಾಳ್ಕರ್, ಶಿವಾಜಿ ಜಾಧವ್, ಪ್ರಶಾಂತ್ ಕುಗಾಜಿ, ಅರ್ಜುನ ಚೌಗುಲೆ, ಪ್ರಶಾಂತ್ ಟಕ್ಕೆಕರ್, ಪರಶುರಾಮ್ ಧಾಮಣೇಕರ್, ಅನಂತ್ ಕುಂಡೇಕರ್, ಮಧು ಕುಗಜಿ, ಕೃಷ್ಣಾ ಕಾಕತ್ಕರ್, ಅಶೋಕ್ ಧಾಮಣೇಕರ್, ತಾನಾಜಿ ಹಲಗೇಕರ್, ಮಾರುತಿ ಗೋರಲ್, ಚಾಂಗಪ್ಪ ಹಲಗೇಕರ್, ಅರವಿಂದ ಪಾಟೀಲ್, ನಾರಾಯಣ ಕಾಕತ್ಕರ್, ಶ್ಯಾಮಲಾ ಜಾಧವ್, ಸುಧಾ ಜಾಧವ್, ಮಲನ್ ಜಾಧವ್, ಕಮಲ್ ಪೋಟೆ, ಜಯಶ್ರೀ ಖಾದರವಾಡಕರ್, ರಾಮಚಂದ್ರ ಬಾಗೇವಾಡಿ, ವಿಕಾಸ್ ಪಾಟೀಲ್, ಸುನೀಲ್ ಪಾಟೀಲ್ ಮತ್ತು ಸತೀಶ್ ಕುಗಜಿ.ನಿರ್ದೋಷ ಮುಕ್ತರಾಗಿದ್ದಾರೆ.

• ಪ್ರಕರಣ ಸಂಖ್ಯೆ 126 ರಲ್ಲಿ ಅರ್ಜುನ ಗೋರಲ್, ಚಾಂಗದೇವ ದೇಸಾಯಿ, ಅನಂತ್ ಚಿತ್ತಿ, ವೃಷೇಷನ್ ಪಾಟೀಲ್, ಸಂಭಾಜಿ ಹಟ್ಟಿಕ್ಕರ್, ಶಿವಾಜಿ ಕದಮ್, ಸುನೀಲ್ ಧಾಮಣೇಕರ್, ಶ್ರೀಕಾಂತ್ ನಂದುಡ್ಕರ್, ರಾಹುಲ್ ಕುಗಜಿ, ನಾಗೇಶ್ ಬೋಬಟೆ, ಸುನೀಲ್ ಕುಂಡೇಕರ್, ರವಳು ಕುಗಜಿ, ಕೇಶವ ಹಲಗೇಕರ್, ಗಣಪತಿ ಪಾಟೀಲ್, ನಾಮದೇವ ನಾಯ್ಕೋಜಿ, ಕೇಶವ ಪಾಟೀಲ್, ರಮೇಶ ಧಾಮಣೇಕರ್, ರಾಮಚಂದ್ರ ಕುಗಜಿ ಮತ್ತು ಸತೀಶ್ ಕುಗಜಿ ನಿರ್ದೋಷ ಮುಕ್ತರಾಗಿದ್ದಾರೆ.

• ಗ್ರಾಮಸ್ಥರ ಪರವಾಗಿ ವಕೀಲರಾದ ಅಡ್ವೊಕೇಟ್ ಶ್ಯಾಮಸುಂದರ್ ಪತ್ತಾರ್, ಅಡ್ವೊಕೇಟ್ ಶ್ಯಾಮ್ ಪಾಟೀಲ್ ಮತ್ತು ಅಡ್ವೊಕೇಟ್ ಹೇಮರಾಜ್ ಬೆಂಚನ್ನವರ್ ವಾದ ಮಂಡಿಸಿದ್ದರು. ಈ ತೀರ್ಪಿನೊಂದಿಗೆ ಯೆಳ್ಳೂರು ಗ್ರಾಮಸ್ಥರ ಮೇಲಿದ್ದ ದಶಕದ ಹಳೆಯ ಕಾನೂನು ಸಂಕೋಲೆ ಕಳಚಿದಂತಾಗಿದೆ.

 

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555