July 17, 2026
WhatsApp Image 2026-06-27 at 2.30.32 PM

ಬೆಳಗಾವಿ: ಮಾದಕ ವಸ್ತುಗಳ ಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿರುವ ಬೆಳಗಾವಿ ಜಿಲ್ಲಾ ಪೊಲೀಸರು, ಡ್ರಗ್ಸ್‌ ಜಾಲದ ವಿರುದ್ಧದ ಸಮರವನ್ನು ತೀವ್ರಗೊಳಿಸಿದ್ದಾರೆ. ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು (ಡ್ರಗ್ಸ್) ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿ ಸಮ್ಮುಖದಲ್ಲಿ ಯಶಸ್ವಿಯಾಗಿ ನಾಶಪಡಿಸಲಾಗಿದೆ.

• 14 ಪೊಲೀಸ್ ಠಾಣೆಗಳ 23 ಪ್ರಕರಣಗಳು
ಜಿಲ್ಲೆಯ ಒಟ್ಟು 14 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಮಾರಾಟ, ಸಾಗಾಣಿಕೆ ಹಾಗೂ ಗಾಂಜಾ ಬೆಳೆ ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದ್ದ 23 ಎನ್‌ಡಿಪಿಎಸ್ (NDPS) ಪ್ರಕರಣಗಳಿಗೆ ಸಂಬಂಧಿಸಿದ ಮಾದಕ ವಸ್ತುಗಳನ್ನು ಒಟ್ಟಿಗೆ ನಾಶಪಡಿಸಲಾಗಿದೆ. ನ್ಯಾಯಾಲಯ ಹಾಗೂ ಮಾಲಿನ್ಯ ನಿಯಂತ್ರಣಾಧಿಕಾರಿಗಳ ಅಧಿಕೃತ ಅನುಮತಿಯನ್ನು ಪಡೆದು ಈ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು.

• ರೂ. 10.41 ಲಕ್ಷ ಮೌಲ್ಯದ ಡ್ರಗ್ಸ್ ಭಸ್ಮ
• ಒಟ್ಟು ತೂಕ: 22 ಕೆಜಿ 500 ಗ್ರಾಂ
• ಅಂದಾಜು ಮೌಲ್ಯ:  ₹10,41,500

ಜೂನ್ 25, 2026 ರಂದು ಸಂಜೆ 4:30 ಗಂಟೆಗೆ ಸವದತ್ತಿ ತಾಲೂಕಿನ ಮುರುಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಹಾರುಗೊಪ್ಪ ಗ್ರಾಮದ ಹದ್ದಿಯಲ್ಲಿರುವ ‘ದಿ ಬೆಳಗಾಂ ಗ್ರೀನ್ ಎನ್ವಿರಾನ್‌ಮೆಂಟಲ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್’ ಘಟಕದಲ್ಲಿ, ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿಯು ಎಲ್ಲಾ ನಿಯಮಾನುಸಾರ ಈ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿ, ನಾಶಪಡಿಸಿದೆ.

ಜಿಲ್ಲೆಯಲ್ಲಿ ಮಾದಕ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಕಾರ್ಯಾಚರಣೆಯು ಡ್ರಗ್ಸ್ ದಂಧೆಕೋರರಿಗೆ ಸ್ಪಷ್ಟ ಎಚ್ಚರಿಕೆಯ ಸಂದೇಶ ರವಾನಿಸಿದೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555