May 30, 2026
WhatsApp Image 2026-05-02 at 12.38.22 PM

ಚಿಕ್ಕೋಡಿ:

ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸುಮಾರು 20ರಿಂದ 25 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಬಡ್ತಿಯ ಕೌನ್ಸಲಿಂಗ್ ದಿನಾಂಕ 29/4/2026 ರಿಂದ 30/4/2026ರ ಎರಡು ದಿನಗಳ ಕಾಲ ಚಿಕ್ಕೋಡಿ ಡಯಟ್ ಸಭಾಭವನದಲ್ಲಿ ನಡೆಸಲಾಯಿತು.

• ನಿಪ್ಪಾಣಿ ಚಿಕ್ಕೋಡಿ ಕಾಗವಾಡ ಅಥಣಿ ಮೂಡಲಗಿ ರಾಯಬಾಗ್ ಗೋಕಾಕ್ ಹುಕ್ಕೇರಿ ತಾಲೂಕಿನ ಸಾಹಸಕ್ಷಕರು ಈ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿ ತಮಗೆ ಉಪಯೋಗವಾಗುವ ಶಾಲೆಗಳಲ್ಲಿ ಬಡ್ತಿಯನ್ನು ಒಂದು ಮುಖ್ಯ ಶಿಕ್ಷಕರಾಗಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕನ್ನಡ ಮುಖ್ಯೋಪಾಧ್ಯರಾಗಿ 390, ಮರಾಠಿ ಮುಖ್ಯೋಪಾಧ್ಯಾಯರಾಗಿ 41, ಉರ್ದು ಮುಖ್ಯೋಪಾದರಾಗಿ 35 ಮುಂಬಡ್ತಿಗಳಿಗೆ ಕೌನ್ಸಿಲಿಂಗ್ ನಡೆಸಲಾಯಿತು. ಈ ಕೌನ್ಸಿಲ್ ನಲ್ಲಿ ಎಂಟು ತಾಲೂಕಿನ 972 ಸಹ ಶಿಕ್ಷಕರು ಭಾಗವಹಿಸಿದರು ಎಂದು ಚಿಕ್ಕೋಡಿ ಜಿಲ್ಲೆಯ ಶೈಕ್ಷಣಿಕ ನಿರ್ದೇಶಕರಾದ ಆರ್ ಸೀತಾರಾಮ್ ಅವರು ತಿಳಿಸಿದರು.

• ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರು ಕೌಸಲಿಂಗ್ ಪ್ರಕ್ರಿಯೆಗೆ ಉತ್ತಮವಾದ ಸೌಲಭ್ಯಗಳನ್ನು ಒದಗಿಸಿ ಸಹ ಶಿಕ್ಷಕರು ಯಾವುದೇ ಗೊಂದಲಗಳಿಲ್ಲದೆ ತಮ್ಮ ಇಷ್ಟಪಟ್ಟ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಂತೋಷದಿಂದ ತಮ್ಮ ತಮ್ಮ ಮನೆಗಳಿಗೆ ತೆರಳಿದರು ಎಂದು ರಾಜ್ಯ ಶಿಕ್ಷಕರ ಸಂಘದ ಕಾರ್ಯದರ್ಶಿಯಾದ ಸಿದ್ರಾಮ ಲೋಕಣ್ಣವರ್ ತಿಳಿಸಿದರು. ಈ ಕೌಸಲಿಂಗ್ ಪ್ರಕ್ರಿಯೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಕಾರ್ಯದರ್ಶಿ ವೈ.ಎಸ್ ಬುಡ್ಡಗೋಳ, ಜಿಲ್ಲಾ ಸಹ ಕಾರ್ಯದರ್ಶಿ ಜಿ.ಆರ್ ಪೂಜಾರಿ, ಮ್ಯಾನೇಜರ್ ದೀಪಕ್ ಮಾನೆ, ಎ.ಎಸ್.ಓ. ಖಾಂಡೇಕರ್ ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆಯ ಉಪದೇಶಕರು ಕಚೇರಿಯ ಸೂಪರಿಡೆಂಟ್ ಸಂಗೀತ ಪಾಟೀಲ್, ಎಸ್. ಕೆ.ಶೇಖ್, ಪ್ರಥಮ ದರ್ಜೆ ಗುಮಾಸ್ತರಾದ ಕೆ.ಆರ್ ಮೋಶಿ, ಎಸ್.ಡಿ.ಎ ಸಂತೋಷ್ ಸಿದ್ದಣ್ಣನವರ್, ಎಫ್. ಡಿ.ಎ.ರಾಜಸಾಬ್ ತಹಸಿಲ್ದಾರ್, ಎಸ್.ಡಿ.ಎ ಪವಿತ್ರ, ಎಪ್ ಡಿ ಎಂ. ಶ್ರೀಶೈಲ ಪುಟ್ಟಣ್ಣ ಶೆಟ್ಟಿ ಡಿ ಗ್ರೋಪ್ ಗಳಾದ, ತುಕಾರಾಂ ಪಾಂಡ್ರೆ, ಕಲ್ಲಂದರ್ ಪಾಟೀಲ್, ಅನಿಲ್ ಕಾಂಬಳೆ, ರಾಹುಲ್ ಶಿಂದೆ, ಮಹೇಶ್ ಬೀರುಣಗಿ ಚಾಲಕರಾದ ಮಹಬಾತ್ ಬಾಗವಾಲೇ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555