ರಾಯಬಾಗ
ರಾಯಬಾಗ:ಹಸಿದ ಭಾರತಕ್ಕೆ ಹಸಿರು ಕ್ರಾಂತಿಯ ಮೂಲಕ ನಮ್ಮೆಲ್ಲರಿಗೆ ಅನ್ನ ಉಣಿಸಿದ ಅನ್ನದಾತರಾಗಿದ್ದ ಡಾ.ಬಾಬು ಜಗಜೀವನ್ ರಾಮ್ ಅವರ ಸೇವೆ ಅಪಾರವಾಗಿದೆ ಎಂದು ಉಪನ್ಯಾಸಕ ಕಾಡೇಶ ಐಹೊಳೆ ಹೇಳಿದರು.
ಪಟ್ಟಣದ ಬಾಬು ಜಗಜೀವನ ರಾಮ್ ಸಭಾಭವನದಲ್ಲಿ ಭಾನುವಾರ ತಾಲ್ಲೂಕ ಆಡಳಿತ ವತಿಯಿಂದ ನಡೆದ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಹಾಗೂ ರೈತರ ಹಿತಾಸಕ್ತಿಗಾಗಿ ತೆಗೆದುಕೊಂಡ ನಿರ್ಣಯಗಳು ದೇಶದ ಆಹಾರ ಭದ್ರತೆಯನ್ನು ಬಲಪಡಿಸಿವೆ ಎಂದು ಅಭಿಪ್ರಾಯಪಟ್ಟರು. ದೇಶದ ಸಂಕಷ್ಟದ ಸಮಯದಲ್ಲಿ ಅವರು ತೋರಿದ ನಾಯಕತ್ವ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ತಹಶೀಲ್ದಾರ್ ಮಹಾದೇವ ಸನಮುರಿ, ಸಿಪಿಐ ಎಂ ಎಂ ಡಫ್ಫಿನ ಮಾತನಾಡಿದರು.
ಅಧಿಕಾರಿಗಳಾದ ಸುಭಾಷ ಭಜಂತ್ರಿ,ವಿಠ್ಠಲ ಚಂದರಗಿ, ಸಂಜೀವ ಮಾಂಗ,ಬಸವರಾಜ ಕಾಂಬಳೆ,ಮುಖಂಡರಾದ ಬಸವರಾಜ ಸನದಿ, ಸುರೇಶ ಐಹೊಳೆ,ಶಿವಾನಂದ ಐಹೊಳೆ, ಮಹೇಶ ಕರಮಡಿ,ಮಹೇಶ ಐಹೊಳೆ,ದಿಲೀಪ ಪಾಯಣ್ಣವರ, ರಿತೇಶ ಅವಳೆ,ಅಪ್ಪಾಸಾಬ ಕೆಂಗಣ್ಣವರ, ರಾಕೇಶ ಅವಳೆ, ಪ್ರೇಮ ಸಾನೆ ಸೇರಿದಂತೆ ಇತರರು ಇದ್ದರು.
