ಹಿಂದೂಗಳಿಗೆ ಸೇವಾಲಾಲರ ಆಧ್ಯಾತ್ಮೀಕತೆ, ಶಿವಾಜಿ ಶೌರ್ಯ ಅಗತ್ಯವಿದೆ: ಸೋಮಲಿಂಗ ಶ್ರೀಗಳು
ಗದಗ: ಕರ್ನಾಟಕ ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟ, ಶಿವ ರಾಮ ಕೃಷ್ಣ ಸೇವಾ ಟ್ರಸ್ಟ್ ಗದಗ ಜಿಲ್ಲೆ, ದಲಿತ ಮಿತ್ರ ಮೇಳ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಿತಿ-2026 ಇವರುಗಳ ಸಂಯುಕ್ತಾಶ್ರಯದಲ್ಲಿ 399 ನೇ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ವಿಜಯಪುರ ಜಿಲ್ಲೆಯ ಶಂಕರಲಿಂಗ ಗುರುಪಿಠದ ಶ್ರೀ ಸೋಮಲಿಂಗ ಶ್ರೀಗಳು, ಶಿವಾಜಿ ಮಹಾರಾಜರು ಕೇವಲ ಯುದ್ದ ಮಾಡಿ ಹಿಂದೂ ಸಾಮ್ರಾಜ್ಯ ಕಟ್ಟಲಿಲ್ಲ. ಆಧ್ಯಾತ್ಮೀಕತೆ ಮೂಲಕವೂ ಕಟ್ಟಿದ್ದಾರೆ. ಸಂತ ಸೇವಾಲಲರ ಆಧ್ಯಾತ್ಮೀಕತೆ, ಶಿವಾಜಿ ಮಹಾರಾಜರ ಶೌರ್ಯದಿಂದ ಹಿಂದೂಗಳು ಹಿಂದೂಗಳಾಗಿ ಉಳಿಯಲು ಸಾಧ್ಯವಾಗಿದೆ. ಕೆಲವು ಮಠಾಧಿಶರು ಹಿಂದೂ ದೇವರುಗಳಿಗೆ ಅವಮಾನ ಮಾಡುತ್ತಿದ್ದಾರೆ. ಅವರಿಗೆ ಸೇವಾಲಲರ ಆಧ್ಯಾತ್ಮೀಕತೆ ಉಪಯೋಗಕ್ಕೆ ಬಲುವುದಿಲ್ಲ. ಶಿವಾಜಿ ಮಹಾರಾಜರಂತಹ ಪರಕ್ರಮ ಬೇಕಾಗಿದೆ ಎಂದರು.
ಪಠ್ಯ ಪುಸ್ತಕದಲ್ಲಿ ಕೇವಲ ಅಪ್ಜಲಖಾನ್, ಬಾಬರ್, ಅಕ್ಬರ್ ಚರಿತ್ರೆ ತೋರಿಸಲಾಗಿದೆ. ಆದರೆ, ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ತೋರಿಸಲಿಲ್ಲ. ಮುಸಲ್ಮಾನ ದೊರೆಗಳು 6 ಸಾವಿರಕ್ಕೂ ಹೆಚ್ಚು ಮಂದಿರಗಳನ್ನು ಕೆಡವಿ ಮಸಿದಿಗಳಾಗಿ ಪರಿವರ್ತನೆ ಮಾಡಿದರು. ಇದರಿಂದ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಸನಾತನ ಸಂಸ್ಕ್ರತಿಗೆ ತನ್ನದೇ ಆದ ಇತಿಹಾಸವಿದೆ. ಮಕ್ಕಳಿಗೆ ಶಿವಾಜಿ ಮಹಾರಾಜ, ಸಂಗೋಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ, ಬಸವಣ್ಣನವರ ಇತಿಹಾಸ ತಿಳಿಸಬೇಕಿದೆ ಎಂದರು.
