May 30, 2026
WhatsApp Image 2026-05-12 at 3.51.54 PM

ವಿಜಯಪುರ

10ನೇ ತರಗತಿಯಲ್ಲಿ ಓದುತ್ತಿರುವ ಮಾನ್ಯತಾ, ‘The Mystery of the Lost Bag’ ಎಂಬ ತನ್ನ ಮೊದಲ ಕಾದಂಬರಿಯನ್ನು ಪ್ರಕಟಿಸಿ ಎಲ್ಲರ ಗಮನ ಸೆಳೆದಿದ್ದಾಳೆ.

ವಿಜಯಪುರ:  ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ಮಕ್ಕಳು ರಜಾದಿನಗಳನ್ನು ಮೊಬೈಲ್ ಗೇಮ್‌, ಸೋಶಿಯಲ್ ಮೀಡಿಯಾ ಮತ್ತು ರೀಲ್ಸ್ ನೋಡುವುದರಲ್ಲಿ ಕಳೆಯುತ್ತಿದ್ದಾರೆ. ಆದರೆ, ವಿಜಯಪುರದ 14 ವರ್ಷದ ಬಾಲಕಿ ಮಾನ್ಯತಾ ಝಾ ಮಾತ್ರ ವಿಭಿನ್ನ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ.

•   ತನ್ನ ಕಲ್ಪನೆಗಳಿಗೆ ಅಕ್ಷರ ರೂಪ ನೀಡಿ, ಕೇವಲ 14ನೇ ವಯಸ್ಸಿನಲ್ಲೇ ಲೇಖಕಿಯಾಗಿ ಗುರುತಿಸಿಕೊಂಡಿರುವ ಈ ಬಾಲಕಿ, ಈಗ ಹಲವರಿಗೆ ಪ್ರೇರಣೆಯಾಗಿದ್ದಾಳ

•   10ನೇ ತರಗತಿಯಲ್ಲಿ ಓದುತ್ತಿರುವ ಮಾನ್ಯತಾ, ‘The Mystery of the Lost Bag’ ಎಂಬ ತನ್ನ ಮೊದಲ ಕಾದಂಬರಿಯನ್ನು ಪ್ರಕಟಿಸಿ ಎಲ್ಲರ ಗಮನ ಸೆಳೆದಿದ್ದಾಳೆ.

•   ವಿಶೇಷವೆಂದರೆ ಕಥೆ ಬರೆಯುವುದರಿಂದ ಹಿಡಿದು, ಆನ್‌ಲೈನ್‌ನಲ್ಲಿ ಪ್ರಕಾಶಕರನ್ನು ಹುಡುಕುವುದು, ಪುಸ್ತಕವನ್ನು ಪ್ರಕಟಿಸುವುದು ಹಾಗೂ ಅಮೆಜಾನ್–ಫ್ಲಿಪ್‌ಕಾರ್ಟ್‌ ಮುಂತಾದ ವೇದಿಕೆಗಳಿಗೆ ತಲುಪಿಸುವುದರವರೆಗೂ ಎಲ್ಲವನ್ನೂ ಆಕೆ ಸ್ವತಃ ನಿರ್ವಹಿಸಿದ್ದಾಳೆ.

ಕೋವಿಡ್ ಸಮಯದಲ್ಲಿ ಹುಟ್ಟಿದ ಕನಸು

•   ಮಾನ್ಯತಾಳ ಸಾಹಿತ್ಯಯಾನ ಆರಂಭವಾದದ್ದು ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ. ಶಾಲೆಗಳು ಬಂದ್ ಆಗಿದ್ದಾಹ ಸಮಯ ಕಳೆಯಲು ಪುಸ್ತಕಗಳನ್ನು ಓದಲು ಆರಂಭಿಸಿದ್ದಳು. ವಿಶೇಷವಾಗಿ ಪೌರಾಣಿಕ ಕಥೆಗಳು ಮತ್ತು ರಹಸ್ಯ ಕಥೆಗಳು ಆಕೆಯ ಮೇಲೆ ದೊಡ್ಡ ಪ್ರಭಾವ ಬೀರಿದವು.

•   “ನಾನು ಓದುತ್ತಿದ್ದ ಕಥೆಗಳು ನನಗೂ ಬರೆಯಬೇಕೆಂಬ ಆಸೆ ಹುಟ್ಟಿಸಿತು. ಮೊದಲಿಗೆ ಚಿಕ್ಕ ಕಥೆಗಳನ್ನು ಬರೆಯಲು ಆರಂಭಿಸಿದೆ, ನಾನು ಓದಿದ್ದ ಕಿರು ಕಥೆ ‘A Wired Road’ ತಿಳಿಯದೆ ನಿಗೂಢ ಗುಹೆಯನ್ನು ಪ್ರವೇಶಿಸುವ ಮತ್ತು ವಿಚಿತ್ರ ಘಟನೆಗಳನ್ನು ಅನುಭವಿಸುತ್ತಾರೆ. ಆಕೆ ಎದ್ದಾಗ ಅದು ಕನಸು ಎಂಬುದು ಆಕೆಗೆ ಅರಿವಾಗುತ್ತದೆ. ಈ ಕಥೆ ನನ್ನನ್ನು ಪ್ರೇರೇಪಿಸಿತ್ತು. ಬಳಿಕ ನಾನು ಸಣ್ಣ ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದೆ ಎಂದು ಮಾನ್ಯತಾ ಝಾ ಹೇಳಿದ್ದಾರೆ.

Leave a Reply

Your email address will not be published. Required fields are marked *

ಅನಿಲ ಶೆಟ್ಟಿ ಉಪಸಂಪಾದಕರು:9241000555